ಭಾರತ ೨೦೧೧

[ಈ ಕವನ ಶ್ರೀ ಕೆ ವಿ ತಿರುಮಲೇಶ್ ರವರ ಅರೇಬಿಯ ೨೦೧೧(http://www.kendasampige.com/article.php?id=4200) ಕವನಕ್ಕೆ ಪ್ರತಿಕ್ರಿಯೆಯಾಗಿ ಬರೆದದ್ದು. ಅವರು ಅಲ್ಲಿನ ಪರಿಸ್ತಿತಿಯಬಗ್ಗೆ ಬರೆದರೆ ನಾನು ಅದಕ್ಕೆ ಪ್ರತಿ ಕ್ರಿಯೆಯಾಗಿ ಭಾರತದ ಬಗ್ಗೆ ಬರೆದಿದ್ದೇನೆ]



ಸಹಸ್ರ ಸೂರ್ಯರ ಘೋಷ ಮೊಳಗಿದ್ದೇ ಮೊಳಗಿದ್ದು
ಪೂರ್ವದಲ್ಲಿ ಹುಟ್ಟುವ ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಾನೆ
ಪ್ರತಿಸೂರ್ಯರ ಮಾತು ಇಲ್ಲ
"ಹೂವನ್ನ ನೋಡುವ ಪುರುಸೊತ್ತು ಇಲ್ಲ"
ಕಿತ್ತು ಮಾರಬಹುದು ಅಥವ ದೇವರಿಗೆ ಹಾಕಬಹುದು
ಕತ್ತಲ ರಾತ್ರಿಯಲ್ಲಿ ಗಾಳಿ ತಂಪಾಗಿ ಬೀಸುತ್ತದೆಂದು
ಹೊರಗೆ ನಡೆದದ್ದು
ಇದ್ದಕ್ಕಿದ್ದಂತೆ ಹೊಳೆದುಬಿಟ್ಟಿತು
"ಹೂ ಅರಳುವ ಕ್ರಿಯೆಯನ್ನ ನೋಡುವ ಬಗೆ"
(ದಯವಿಟ್ಟು ಕಾರಣ ಕೇಳಬೇಡಿ ಯಾಕೆ ಹೊಳೆದದ್ದು ಎಂದು)
ಕತ್ತಲಲ್ಲವೆ
ಮೊಬೈಲ್ ಫೋನ್ ನಲ್ಲಿನ ಬೆಳಕನ್ನ ಉಪಯೋಗಿಸಿಕೊಂಡು ಕೂತು
"ಹೂ ಅರಳುವ ಕ್ರಿಯೆಯನ್ನ ನೋಡುವುದಕ್ಕೆ"

ಕಿಟಕಿಗಳಿಲ್ಲ ಗರ್ಭಗುಡಿಗೆ
ಬಯಲಿಗೆ ಭಗವಂತ ಬಾರದೆ
ಮನುಷ್ಯ ಮಹಾಮೌನ ಮುರಿಯುವುದಿಲ್ಲ
ಹೊರಡುವುದೇ ಇಲ್ಲ ಇನ್ನು ಮರಳುವ ಮಾತೆಂತು

ಅರಚುತ್ತೇನೆ ಕಿರುಚುತ್ತೇನೆ ಕೆಲವೊಮ್ಮೆ
ಮುಷ್ಟಿ ಮೈಥುನದಂತಾದಾಗ ಬೇಸರಿಸಿಕೊಳ್ಳುತ್ತೇನೆ
ಗಿರಿಕಂದರ ಹಳ್ಳ ಕೊಳ್ಳ
ಕ್ಕೆ
ಪರಿತಾಪಿಸುತ್ತೇನೆ, ಧ್ವನಿಗೆ ಪ್ರತಿಧ್ವನಿಯನ್ನ.
ವ್ಯಾಕರಣಬದ್ದ ಪದಗಳ ರಾಶಿಯಿಂದ ಪುಸ್ತಕವಾದಾಗ
"ನಾನು ಸ್ವಾತಂತ್ರ್ಯ ಜೀವಿ"
ಮನೆ ಬಾಗಿಲು ಯಾರೋ ತಟ್ಟುತ್ತಿದ್ದಾರೆ
ಆದರೂ ನಂಬಿಕೆಯಿದೆ, ಮತ್ತೆ ಮತ್ತೆ
ಹೆಮ್ಮೆಯಿಂದ ಉಚ್ಚರಿಸುತ್ತೇನೆ
"ಭಾರತ ಓ ನನ್ನ ಭಾರತ
ಅದೆಂತ ಸಂಬಂಧ ನನಗೂ ನಿನಗು
ಅದೆಂತು ಕರೆತಂದು ನಿಲ್ಲಿಸಿದಿ ಇಲ್ಲಿ
ನಾ ಕನಸಲ್ಲೂ ಕಂಡಿರದ ಜಾಗದಲಿ"

"ಭೂಮಿ ಚಲನೆಯಲ್ಲಿ ಇರುವುದರಿಂದ
ನೀ ತಟಸ್ಥವಾಗಿದ್ದರೂ ಚಲಿಸುತ್ತಿರುತ್ತೀಯೆ"
ಇದು ಸದ್ಯದ ಪರಿಸ್ಥಿತಿ
ಆನೆ ನಡೆದದ್ದೇ ದಾರಿ ಎಂದೆಣಿಸಿದರೂ,
ಎಲ್ಲೋ ಭಯವಾಗುತ್ತಿದೆ
ಪುಟ್ಟ ಹಕ್ಕಿಗಳ ಗೂಡುಗಳು ನಲುಗುತ್ತಿವೆಯೆ ಎಂದು
ಕಾಲ್ತುಳಿತಕ್ಕೆ ಮೊಲಗಳೇನಾದರೂ ಸಿಕ್ಕಿವೆಯೆ ಎಂದು
ನೀವೆನ್ನಬೊಹುದು "ದಾರಿ ಬೇಕಲ್ಲವಯ್ಯ ಎಂದು"
ಗುರುಗಳೆ ಎಳೆ ಕಣ್ಗಳು ನಂದು
ದೂರ ಚಿಂತಿಸಲು ಶಕ್ತವಾಗಿಲ್ಲದಂತಿದೆ
ನಾನೆನುತ್ತೇನೆ
"ಕರುಣಾಳು ಬಾ ಬೆಳಕೆ, ಮುಸುಕಿದೀ
ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆದೂರೆ
ಕನಿಕರಿಸಿ ಕೈ ಹಿಡಿದು ನಡೆಸೆನ್ನನು"

ಒಂದು ಗೆಲುವು.....


ಅಣ್ಣ ಹಜಾರೆ ಯವರ ಉಪವಾಸ  ಸತ್ಯಾಗ್ರಹ ಮುಗಿದಿದೆ. ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸಿದೆ. ಇಡೀ ದೇಶವೇ ಒಟ್ಟಾಗಿ ಸಂಭ್ರಮಿಸುತ್ತಿದೆ. ಸಂತೋಷ. ನಾವು ನಡೆವಾಗ ಕೆಲವು ವಿಜಯಗಳು ನಮ್ಮನ್ನು ಇನ್ನಷ್ಟು ಬಲಪಡಿಸುತ್ತವೆ ಹಾಗು ಮುಂದೆ ಸಾಗಲು ಸಾದ್ಯ ಎಂದು ಹೇಳುತ್ತವೆ ಅದಕ್ಕಾಗಿ ನಮಗೆ ಈ ರೀತಿಯ ವಿಜಯಗಳು ಅವಷ್ಯ. ಮೊದಲನೆಯದಾಗಿ ಅಣ್ಣಾ ಹಜಾರೆ ಅವರಿಗೆ ವಂದನೆಗಳು. ನಿಜ ಈಚಿನ ದಿನಗಳಲ್ಲಿ ನಾವೇ ನೋಡುತ್ತಿದ್ದಂತೆ ದೇಶದಲ್ಲಿ ಭ್ರಷ್ಟಾಚಾರ ಯಾರೂ ತಡೆಯಲಾಗದ ಮಟ್ಟಕ್ಕೆ ತಲುಪಿತ್ತು. ತಲುಪಿದೆ. ನಮಗೆ ಒಂದು ನಾಯಕತ್ವ ಬೇಕು. ಇಲ್ಲಿ ಹಲವರಿಗೆ ಭ್ರಷ್ಟಾಚಾರದ ವಿರುದ್ದ ಕೋಪವಿದೆ ಆದರೆ ಇಲ್ಲಿ ಯಾರಿಗೂ ಬಿಡುವು ಇಲ್ಲ, ಆದ್ದರಿಂದ ಹಲವರಿಗೆ ತಾವು ನಾಯಕರಾಗುವುದು ಸಾದ್ಯವಿಲ್ಲ. ಆದ್ದರಿಂದ ನಾಯಕರಿಗಾಗಿ ಕಾದಿದ್ದಾರೆ. ಅಂತ ನಾಯಕರು ಬಂದಾಗ ಸಂಭ್ರಮಿಸುತ್ತಿದೇವೆ. ಅಂತ ಒಂದು ನಾಯಕತ್ವವನ್ನ ಅಣ್ಣಾ ಹಜಾರೆ ಅವರು ನೀಡಿದ್ದಾರೆ. ಮತ್ತೆ ಅವರಿಗೆ ವಂದನೆಗಳು.

ಮತ್ತೆ ನಮ್ಮ ಸಂಸ್ಕೃತಿಯ ತತ್ವಗಳಿಗೆ ವಿಜಯ ಸಿಕ್ಕಿದೆ. ಅಹಿಂಸೆ ಗೆದ್ದಿದೆ. ಇಲ್ಲಿ ನನಗೆ ವೈಯುಕ್ತಿಕವಾಗಿ ಈ ಗೆಲುವು ಕೇವಲ ಅಣ್ಣಾ ಹಜಾರೆಯವರ ಗೆಲುವೂ ಅಥವ ಕೇವಲ ಭ್ರಷ್ಟಾಚಾರದ ವಿರುದ್ದದ ಗೆಲುವು ಮಾತ್ರ ಆಗಿ ಕಾಣುತ್ತಿಲ್ಲ. ಒಬ್ಬ ವ್ಯಕ್ತಿಯ ಅಂತಃಸತ್ವಕ್ಕೆ, ಆತನ ಸಾಕ್ಷಿಪ್ರಜ್ಞೆಗೆ ದೊರೆತ ಗೆಲುವಾಗಿ ಕಂಡಿದೆ. ಆದ್ದರಿಂದ ಮತ್ತೇ ನಮ್ಮ ತತ್ವಗಳಿಗೆ ದೊರೆತ ಗೆಲುವಾಗಿದೆ. ಗಾಂದಿ ಮತ್ತೆ ಗೆದ್ದಿದ್ದಾರೆ. ಅಹಿಂಸೆ ಮತ್ತೆ ಗೆದ್ದಿದೆ. ವಿಜೃಂಬಣೆಯಿಂದ ಗೆದ್ದಿದೆ. ಸಿನಿಕರಾಗಿ ಹೋದ ಎಷ್ಟೋ ಮಂದಿಗೆ, ಇಲ್ಲ ಸಿನಿಕರಾಗಬೇಡಿ, ತತ್ವಗಳು ಇನ್ನೂ ಇದ್ದಾವೆ. ಅವುಗಳಿಗೆ ಸೋಲೆಂಬುದೇ ಇಲ್ಲ. ಅವು ಗೆಲ್ಲಬೊಹುದು ಎಂಬುದನ್ನ ತೋರಿಸಿದ್ದಾರೆ. ಗಾಂದಿ ಗೆದ್ದಿದ್ದಾರೆ, ಬುದ್ದ ಗೆದ್ದಿದ್ದಾನೆ. ಒಟ್ಟಾಗಿ ಭಾರತ ಗೆದ್ದಿದೆ.

ಇದನ್ನ ನಾನು ಕಂಡೀತವಾಗಿಯೂ ಒಂದು ಗೆಲುವಾಗಿ ಪರಿಗಣಿಸುತ್ತೇನೆ. ಹಾಗು ಈ ಗೆಲುವನ್ನ ಸಂಭ್ರಮದಿಂದ ಆಚರಿಸುತ್ತೇನೆ. ಪ್ರತಿ ಗೆಲುವು ಹಾಗು ಸೋಲುಗಳನ್ನ ನಾವು ಭಾವನಾತ್ಮಕ ಸಂಗತಿಗಳಾಗಿ ಪರಿಗಣಿಸಿಬಿಟ್ಟಾಗ ಅಲ್ಲಿ ಆ ಕ್ಷಣದ ಉದ್ರಿಕ್ತತೆಯೊಳಗೆ ನಿಜವಾದ ಸತ್ವ ದಕ್ಕದೆ ಹೋಗುತ್ತದೆ. ಆದ್ದರಿಂದ ಗೆಲುವನ್ನ  ಸ್ವೀಕರಿಸಿ, ಅದಕ್ಕೆ ಸಂಬಂಧಪಟ್ಟ ಕೆಲವು ವಿಚಾರಗಳು ಅವಶ್ಯವಾಗಿದೆ. ಯಾವ್ದನ್ನ ನಾವು ಭ್ರಷ್ಟಾಚಾರ ಅಂತ ಕರೀತೀವಿ. ಹಣ ತಗೋಳೋದು ಮತ್ತು ಹಣನೀಡೋದು. ಇಷ್ಟು ಮಾತ್ರ ಸಾಕ..? ಒಂದು ಕಡೇಯಿಂದ ಎಕ್ಕುಟ್ಟುಹೋಗಿದೆ, ರಾಜಕೀಯ ಬಿಡಿ ಅದರ ಬಗ್ಗೆ ಮಾತನಾಡಲೂ ಸಾದ್ಯವಿಲ್ಲಷ್ಟರ ಮಟ್ಟಿಗೆ ಎಕ್ಕುಟ್ಟೋಗಿದೆ. ಒಂದಂತೂ ಸತ್ಯ ಅದನ್ನೆಲ್ಲಾ ಕೆಡಿಸಿ ಹಾಕಿರೋವ್ರೂ ನಾವೆ. ಹಾಗು ಬಂದು ಮತ್ತೇ ಮಾತಾಡ್ತೇವೆ ದೇಶ ಕೆಟ್ಟೋಗಿದೆ ಹಾಳೋಗಿದೆ ಅದೂ ಇದೂ ಅಂತ. ಯಾರಯ್ಯ ಭ್ರಷ್ಟರಾಗಿರೋದು? ದೇಷ ಭ್ರಷ್ಟವಾಗುತ್ತಾ....? ದೇಷ ಅಂದರೆ ಏನು, ಜನ, ಅಲ್ಲಿನ ಜನ. ಜನರು ಕೆಟ್ಟಿರೋದು. ಆದ್ದರಿಂದ ಈ ಗೆಲುವನ್ನ ಮತ್ತೆ ಜನರನ್ನ ಸರಿ ಮಾಡಬೇಕಿರೋ ಮದ್ದು ಆಗ್ಬೇಕು. ಆಗ ದೇಶ ಸರಿಹೋಗುತ್ತೆ. ಬಿಡಿ ಜನ ಸರಿಹೋಗಲ್ಲ. ಸಿನಿಕತನವನ್ನ ಬಿಡಬೇಕು. ಹಾಗು ಬಿಡಲೇಬೇಕು. ಸಾಕ್ಷಿಪ್ರಜ್ಞೆ ಅಂತ ಒಂದು ಪದ ಇದೆ. ಅದು ಸತ್ತು ಹೋಗಿದೆ. ಅದಕ್ಕೆ ಈಗ ಮತ್ತೆ ಅಮೃತವನ್ನ ನೀಡಿ ಉಳಿಸಬೇಕಿದೆ. ಉಳಿಸಬೊಹುದಾಗಿದೆ ಕೂಡ.

ಈ ಗೆಲುವನ್ನ, ಅಥವ ಈ ಒಂದು ಆಂದೋಲನವನ್ನ ನಮ್ಮಗಳ ಸಾಕ್ಷಿಪ್ರಜ್ಞೆಯ ಪುನರುತ್ಥಾನಕ್ಕೆ ನಾಂದಿಯಾಗಬೇಕಿದೆ. ಇದ್ದದ್ದನ್ನ ಮತ್ತೆ ಜೀವಂತವಾಗಿಸುವ, ಜೀವಂತವಾಗಿ ಬೆಳೆಸುವ ಅಥವ ಸತ್ತಿದ್ದರೆ ಸಂಜೀವಿನಿಯನ್ನ ತಂದಾದರೂ ಮತ್ತೆ ಕಟ್ಟಬೇಕಿದೆ.  ಕಟ್ಟುವುದು ಸದಾ ಒಳಗಿನ ಕ್ರಿಯೆ ಹಾಗು ಒಳಗಿನಿಂದಲೇ ಆಗಬೇಕಿದೆ. ನಮಗೆ ಗೊತ್ತು ಪ್ರತೀ ಮನುಷ್ಯನಿಗೂ ಇದು ಸಾಮಾನ್ಯ. ಮನುಷ್ಯ ಇತರೆ ಪ್ರಾಣಿಗಳಿಗಿಂತ ಬೇರೆಯಾಗುವುದೇ ಈ ವಿಷ್ಯದಲ್ಲಿ. ಅವನಿಗೆ ಸರಿ ಯಾವುದು ಹಾಗು ತಪ್ಪು ಯಾವುದು ಎಂದು ಗೊತ್ತಿದೆ. ಹಾಗೆ ಗೊತ್ತಿರಲಿಕ್ಕೆ ಕಾರಣವೇ ಒಳಗಿನಿಂದ ಕೇಳುವ ಒಂದು ಧ್ವನಿ.  ಆ ಧ್ವನಿಯೇ ನಮ್ಮನ್ನ ಮನುಷ್ಯರನ್ನಾಗಿಯೂ ಅಥವ ರಾಕ್ಷಸರನ್ನಾಗಿ ಮಾಡಬಲ್ಲದ್ದು. ನನಗೆ ಬಯವಾಗುತ್ತಿದೆ ಸುತ್ತಾನೋಡಿದಾಗ. ಕಾರಣ ಒಮ್ಮೆಗೇ ಎಲ್ಲಿಯೂ ಆ ಒಳಗಿನ ದ್ವನಿಯನ್ನ ಬೆಳೆಸುವಂತಹ ವಾತಾವರಣವೇ ಇಲ್ಲ. ಎಲ್ಲಿದ್ದೇನೆ ನಾನು ಎಂದು ಹಲವುಬಾರಿ ನೋಡಿಕೊಂಡಿದ್ದೇನೆ. ಯಾವ ಕ್ಷೇತ್ರವನ್ನಾದರೂ ತೆಗೆದುಕೊಳ್ಳಿ. ಅಲ್ಲೆಲ್ಲಾ ಸತ್ತ ಹೆಣಗಳೇ ತುಂಬಿಹೋಗಿದ್ದಾವೆ, ಹಾಗು ಹಾಗೆ ಸತ್ತ ಶವಗಳನ್ನ ಸೆಂಟ್ ಹಾಕಿ ನೋಡ್ಲಿಕ್ಕೆ ಇಟ್ಟಿದ್ದಾರೆ.. ಸದಾ ಕೇಳ್ಬೇಕಿದ್ದ ಆ ಧ್ವನಿಯನ್ನ ಸಮಯಕ್ಕೆ ತಕ್ಕಂತೆ ಬದಲಾಯಿಸುವ ವ್ಯವಸ್ಥೆಯನ್ನ ನಾವು ಮಾಡಿಕೊಂಡಿದ್ದೇವೆ. ಬೇಕಾದಾಗ ಎಷ್ಟು ಸಾದ್ಯವೋ ಅಷ್ಟು ಕಿರಿದಾಗಿಸುವ  ಸಾದ್ಯತೆಯನ್ನ ನಾವು ಮಾಡಿಕೊಂಡಿದ್ದೇವೆ. ಹಾಗು ನಾವು ಸಾಯುತ್ತಿದ್ದೆವೆ. ನೀತ್ಸೆ ಹೇಳಿದ ದೇವರು ಸತ್ತಿದ್ದಾನೆ ಎಂದು, ಈಗ ದೇವರಲ್ಲ ಮನುಷ್ಯ ಸತ್ತಿದ್ದಾನೆ. ದೇವರು ಬಿಡಿ, ಆತ ಸತ್ತು ಎಷ್ಟೋ ಕಾಲವಾಗಿದೆ. ಆದೆರೆ ಈಗ ಎಷ್ಟು ಎಷ್ಟು ಬೇಗ ಮನುಷ್ಯನನ್ನು ಸಾದ್ಯವೋ ಅಷ್ಟು ಬೇಗ ಆತನನ್ನು ಸಾಯಿಸುತ್ತಿದ್ದಾನೆ ಹಾಗು ಸಾಯಲು ಇಚ್ಚಿಸುತ್ತಿದ್ದಾನೆ.  ಬಹುಪರಾಕ್.

ಭ್ರಷ್ಟತೆ ಎಂದರೆ ಕೇವಲ ಹಣ ಸ್ವೀಕರಿಸೋದು ಮಾತ್ರ ಆಗಬಾರ್ದು, ಆ ಒಳಗಿನ ಧ್ವನಿಯನ್ನ ತಾನೆ ಸ್ವತಃ ಕೊಲ್ಲುವ ಪ್ರತಿ ಕ್ರಿಯೆಯೂ ಭ್ರಷ್ಟವೆ. ಹಾಗಾಗಿ ಈ ಎಲ್ಲಾ ಸಮಸ್ಯೆಗಳಿಗೆ ಉತ್ತರವೆಂದರೆ ನಮ್ಮಗಳ ಆ ಒಳಗಿನ ಧ್ವನಿಯನ್ನ ಬಲಪಡಿಸೋದು ಅದನ್ನೇ ನಾನು ಸಾಕ್ಷಿಪ್ರಜ್ಞೆ  ಪುನರುತ್ಥಾನ ಎಂದದ್ದು. ನನ್ನ ಮಟ್ಟಿಗೆ ಅದೊಂದೇ ನಮ್ಮೇಲ್ಲಾ ಸಮಸ್ಯೆಗಳಿಗೆ ಉತ್ತರವಾಗಬಲ್ಲದು .ಅದು ಬಿಟ್ಟು ಇನ್ಯಾವುದೇ ಉತ್ತರಗಳೂ ಕೇವಲವಾದೀತೆ ವಿನಃ ಮತ್ತೇನು ಅಲ್ಲ. ನಮ್ಮ ಆ ದ್ವನಿಯನ್ನ ಬಲಪಡಿಸುವುದು ಮಾತ್ರ ಎಲ್ಲಕ್ಕೂ ಉತ್ತರ. ಮೌಲ್ಯಗಳ ಮರುವ್ಯಾಖ್ಯಾನ. ಈಗಿನ ಪರಿಸ್ಥಿತಿಯಲ್ಲಾದರೂ ನಾವು ನಮ್ಮ ಮೌಲ್ಯಗಳನ್ನ ಮರುವ್ಯಾನಿಸಬೇಕಿದೆ. ದುಡ್ಡಿಗೆ ನಾವು ಕೊಡುವ ಪ್ರಾಮುಖ್ಯತೆಯನ್ನ ನಿಲ್ಲಿಸಬೇಕು. ಇವೆಲ್ಲವೂ ಒಳಗಿನ ದ್ವನಿಯನ್ನ ಕೇಳುವುದೇ ಆಗಿರುತ್ತದೆ ಬಿಡಿ.

ಹಜಾರೆಯವರಿಗೆ ಸಾದ್ಯವಾದರೆ ನಮಗೇಕೆ ಸಾದ್ಯವಿಲ್ಲ...? ಇಲ್ಲಿ ಯಾವ ವ್ಯಕ್ತಿಯೂ ಶ್ರೇಷ್ಠನಲ್ಲ. ಇಲ್ಲಿ ಎಲ್ಲರೂ ಸಾಮಾನ್ಯರೆ. ಆದರೆ ಆ ಸಾಮಾನ್ಯತೆಯನ್ನ ಮೀರಿಲು ಅವರುಗಳು ತಮ್ಮ ಧ್ವನಿಗೆ ಕೊಟ್ಟ ಮಹತ್ವವೇ ಆಗಿದೆ. ಆದರೆ ನಾವು ವ್ಯಕ್ತಿ ಪ್ರಿಯರು ತತ್ವ ಪ್ರಿಯರಲ್ಲ. ಆದ್ದರಿಂದ ವ್ಯಕ್ತಿಗೆ ಜೈಕಾರವನ್ನ ಹಾಕಿಬಿಡುತ್ತೇವೆ. ತತ್ವವನ್ನ ಮರೆತುಬಿಡುತ್ತೇವೆ. ಆದ್ದರಿಂದಲೇ ನಾವು ಬುದ್ದನ್ನನ್ನೂ, ಗಾಂದಿಯನ್ನೂ ಮರೆತಿರುವುದು. ಅವರು ನಮಗೆ ಗೊತ್ತು ಅವರು ನಮೆಗೆ ಬೇಕು ಆದರೆ ಅವರ ತತ್ವಗಳಲ್ಲ. ಅವ್ರೆಲ್ಲರೂ ಸಾಮಾನ್ಯರೆ, ಇಲ್ಲ್ಲಿ ಸಾಮಾನ್ಯ ಮಾತ್ರ ಏನನ್ನಾದರೂ ಮಾಡಬಲ್ಲ. ಆದ್ದರಿಂದ ನಾವು ಸಾಮಾನ್ಯರು ಹಾಗು ನಾವು ಏನು ಬೇಕಾದರೂ ಮಾಡಬಲ್ಲೆವು.

ಬಂದಿತ ಪಕ್ಷಿಯ ಕೂಗು ಸದಾ ರೋಧನವಾಗಿಯೆ ಉಳಿದುಬಿಡುತ್ತದೆ. ಸ್ವತಂತ್ರ್ಯ ಪಕ್ಷಿ ಮಾತ್ರ ಸ್ವಚ್ಚಂದವಾಗಿ ಹಾರಾಡುತ್ತದೆ. ನಮ್ಮೊಳಗಿನ ಧ್ವನಿಗೆ ಸ್ಪಂದಿಸುವಾಗ ಮೊದಲು ನಾವು ಸ್ವಂತಂತ್ರ್ಯವಾಗಿರಬೇಕು ಹಾಗು ಆ ಸ್ವಾತಂತ್ರ್ಯದ ವ್ಯಾಖ್ಯಾನವೇ ಸಾಕ್ಷಿಪ್ರಜ್ಞೆಯ ವ್ಯಾಖ್ಯಾನವು ಆಗುತ್ತದೆ. ತಪ್ಪನ್ನು ಕಂಡಾಗ ಅದನ್ನ ವಿರೋದಿಸಲಾಗದ ನಮ್ಮ ದೌರ್ಬಲ್ಯವೇ ನಮ್ಮನ್ನ ಮೊದಲು ಭ್ರಷ್ಟರನ್ನಾಗಿ ಮಾಡೋದು. ನಮ್ಮ ಕಣ್ಣೆದುರಿಗೇ ಯಾರೋ ನಮ್ಮನ್ನೇ ಕೊಲ್ಲಲು ನಿಂತಾಗ ಅದನ್ನ ವಿರೋದಿಸುವ ಕನಿಷ್ಠ ಪ್ರಜ್ಞೆಯೂ ಬೆಳಸಿಕೊಳ್ಳದೇ ಹೋದರೆ ನಾವು ಮನುಷ್ಯರಾಗಿರೋದಾದರೂ ಏತಕ್ಕೆ. ಸಾವು. ಇತಿಹಾಸದ ಪ್ರತೀ ಘಟ್ಟದಲ್ಲಿಯೂ ಸ್ವಾತಂತ್ರಕ್ಕೆ ಹೋರಾಡಿದ್ದೇ ಆಯಿತು. ನಮ್ಮ ನಮ್ಮ ಸ್ವಾತಂತ್ರವನ್ನ ಗಳಿಸೋದಾದರೂ ಯಾವಾಗ..? ಎಲ್ಲಾ ಕಡೆಯೂ ಈಗೀಗ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಮಾತು ಆಡುತ್ತಿದ್ದಾರೆ. ಮತ್ತೋಂದಲ್ಲ ನಿತ್ಯ ಸ್ವಾತಂತ್ರ್ಯ ಸಂಗ್ರಾಮ ಅವಶ್ಯವಿದೆ ಇಂದು. ಅದು ನಮ್ಮ ನಮ್ಮದೇ ಸಾಕ್ಷಿಪ್ರಜ್ಞೆಯನ್ನ ಉಳಿಸಿಕೊಳ್ಳುವ ಸಂಗ್ರಾಮ.

ಒಳಗಿನ ದ್ವನಿಗೆ ಒಮ್ಮತವಾಗಿ ನಡೆವುದು ಮಾತ್ರ ಬದುಕಾಗುತ್ತದೆ. ಎಷ್ಟು ಕಾಲ ಆ ಒಳಗಿನ ದ್ವನಿಯ ಜೊತೆಗಿನ ಸಹಮತದೊಂದಿಗೆ ನಾವು ಹೆಜ್ಜೆಹಾಕಿದ್ದೇವೆ ಎಂಬೋದು ಮಾತ್ರ ಮನುಷ್ಯನ ಬದುಕಿಗೆ ಮುಖ್ಯವಾಗುತ್ತೆ. ಉಳಿದದ್ದೆಲ್ಲವೂ ಕಾಲದಲ್ಲಿ ಕೊಚ್ಚಿಕೊಂಡು ಹೋಗುತ್ತೆ. ಈ ವಿಜಯದ ನೆನಪಲ್ಲಾದರೂ ಮತ್ತೆ ನಾವು ನಮ್ಮನ್ನ ಪ್ರಶ್ನಿಸಿಕೊಳ್ಳೊಣ, ಎಷ್ಟರ ಮಟ್ಟಿಗೆ ನಾವು ನಮ್ಮ ಧ್ವನಿಯನ್ನ ಕೇಳುತ್ತಿದ್ದೇವೆ ಹಾಗು ನಾವು ಬದುಕುತ್ತಿದ್ದೇವೆ ಎಂದು. ಮತ್ತೆ ಅಣ್ಣಾ ಹಜಾರೆಯವರಿಗೆ ವಂದನೆಗಳು.  ಗಾಂದಿ ಗೆದ್ದಿದ್ದಾರೆ, ಬುದ್ದ ಗೆದ್ದಿದ್ದಾನೆ, ನಾವು ಗೆಲ್ಲಬಲ್ಲೆವು.