ನೀ ಮುಡಿದ ಮಲ್ಲಿಗೆ ಮಾಲೆಯ
ಒಂದೆಸಳು
ನೀ ಕುಣಿವಾಗ
ರುಂಡಗಳ ಹಾರುತ
ಅದರ ರಕುತವ ತಾಗಿ
ತೊಟ್ಟಿಡುತ್ತ ಕಾಲಿಗೆ
ಮದರಂಗಿಯಾಗಿದೆ
ಅವ್ವಾ, ಶಿವನು ಮುಡಿಸಿದ್ದನೇನೆ
ಆ ಮಲ್ಲಿಗೆಯ ಮಾಲೆಯ
ಶಿವನೊಮ್ಮೆ ಕೋಪವ ನಟಿಸಬೇಕೆಂದೆಣಿಸಿದನಂತೆ
ರಮಿಸುವ ಬಗೆಯೆಂದು
ಕಣ್ಣ ಕೆಂಪಿಕ್ಕಿ
ಸುಟ್ಟ ಶವದ ಭಸ್ಮ ಬಳಿದು
ಮುಖವ ಬಿಗಿದು
ನೀ ಕಂಡದ್ದೇ
ತಡೆಯಲಾರದ ನಗೆಯ ನಕ್ಕೆ
ರುಂಡಗಳೆಗರಿ ಭುವಿಗೆ ತಾಕಿ
ಜೀವ ತಳೆದು ಕುಣಿದವು
ನಿನ್ನ ಆ ನಗುವ ಕಂಡು