ಹೊರಗೆ ಬಾ
ಚೈತನ್ಯ ಹೇಳಿದ
ಕಲ್ಲಿಗೆ
ಅದರದೇ ಭಾಷೆಯಲ್ಲಿ
ನಿನ್ನ ಮುಖದಿಂದ ಆ ಕೆಂಬಣ್ಣ ಒರೆಸಿಕೋ
ಸರಿ ಹೊಂದುವುದಿಲ್ಲ ನಿನಗೆ
ನೀನು ಬರಿಯ ಕಲ್ಲಾಗಿರು
-ವುದರಿಂದೇನು ತೊಂದರೆ
ನಿನಗಾಗಿ ಹೂಗಳ ತರುತ್ತಲೇ ಇರುತ್ತೇನೆ
ನಿನಗೆ ಚೆಂಡು ಹೂ ಇಷ್ಟ
ಅಲ್ಲವಾ…
ನನಗೂ
ಅರುಣ್ ಕೋಲತ್ಕರ್ (Arun Kolatkar) ಅವರ “Chaitanya” ಕವನದ ಕನ್ನಡ ಅನುವಾದ by ಅಶ್ವಿನಿ ಅರವಿಂದ