ಭಸ್ಮಾರತಿ



ಶಿವನೆಂಬುದೊಂದಕ್ಷರ  

ಭಗ ಭಗ ಸುಡುವ ಅಕ್ಷರ  

ನೋಡಲ್ಲಿ  ಮಣಿಕರ್ಣಿಕದ 

ಘಾಟಿನಲ್ಲಿ  ಘಮದಲ್ಲಿ  

ಸ್ಮಶಾನ  ಶಂಕರ ತಟದಲ್ಲಿ

ಸಂಕರ  ಹೊತ್ತು ತಿರುಗಿತಿರುಗಿ

ಆಹಾ ಅಸ್ತವೇ!!!

ಕಪ್ಪು ಶಿಲೆಯೇ!!!

ಕರ್ಕಶವೇ! ಸಮ್ಮಿಲನದಾದಿನಾದವೆ 

ಇಲ್ಲೇ, ಅದೂ  ಉರಿದಿದೆ ಇಲ್ಲೇ

ಹರಿದಿದೆ, ತಿರುಗಿ ತಿರುಗಿ

ಅದೋ  ನೋಡು ಆದಿಜ್ವಾಲೆ

ಮೊದಲ ಮುಖಕ್ಕೆ ತಾಕಿದ ಮೊದಲ ಬೆಂಕಿ

ಉರಿಯುತ್ತಲೇ ಇದೆ ಇನ್ನೂ 

ಹರಿದ ಮುಖಗಳ ರಾಶಿಯ ದಾಟಿ ದಾಟಿ  

ಇಳಿದು ನೋಡುಉರಿದು ನೋಡು 

ಎಂದೆನ್ನುತ್ತಲೇ 

ಮೈಯಿಗೆ ತುಪ್ಪ ಸುರಿದು ದಬ್ಬಿದ 

ಶ್ರೀಗುರು ಅಭಿಧಾ 

ಮೈಯೆಲ್ಲಾ ಉರಿ, ಗುರುವೇ ಸುಡುತ್ತಿದೆ

ನೋಡು! ಆದಿ  ಮುಖವ

ಆದಿ  ಮುಖಕ್ಕೆ ಸ್ಪರ್ಶಿಸಿದ ಅನಾದಿ ಮುಖವ 

  ಸ್ಪರ್ಶದ ಸ್ಪಂದವ

ಸುಟ್ಟ ಮೇಲೇನೂ ಇಲ್ಲ ಗುರುವೆ

ಸುಟ್ಟ ಮೇಲೇನೂ ಉಳಿಯಲೇ ಇಲ್ಲ ಗುರುವೆ

ಮುಖ್ಯವಾವುದು ಇಲ್ಲ 

ಆದಿಯೂ ಇಲ್ಲ 

ಅನಾದಿಯು ಇಲ್ಲ

ಅಂತ್ಯವೂ ಇಲ್ಲ

ಗುರುವೇ, ಶಿವನಕ್ಷರವಲ್ಲ 

ಮಹಾಕಾಲನ  ಭಸ್ಮಾರತಿ”   


ಕಥಾ ಸಂಕಲನ : ಸಂಚದ ನೋಟ ಒಂದೆ ನೋಡಾ

 ಆತ್ಮೀಯರೇ


ಒಂದು ದಶಕಕ್ಕೂ ಹೆಚ್ಚಿನ ಕಾಲ ಬರೆದ ಕತೆಗಳ ಸಂಗ್ರಹ ಇಲ್ಲಿದೆ. ಕತೆ ಅನ್ನುವುದಕ್ಕಿಂತ ಒಂದಿಷ್ಟು ಗದ್ಯ ಅನ್ನಬಹುದು ಅಷ್ಟೆ. ಹೀಗೆ ಬರೆದ ಹದಿನಾಲ್ಕು ಕತೆಗಳನ್ನು ಒಟ್ಟು ಮಾಡಿ ಇಲ್ಲಿ ಪ್ರಕಟಿಸುತ್ತಿದ್ದೇನೆ. ಇವೆಲ್ಲವೂ ಇದಾಗಲೇ ಇದೆ ಬ್ಲಾಗಿನಲ್ಲಿ ಪ್ರಕಟಿಸಿದವುಗಳು (ಕಥನ


ಓದಿ ನಿಮ್ಮ ಅಭಿಪ್ರಾಯ ತಿಳಿಸಿ


ಓದಲಿಕ್ಕೆ ಇಲ್ಲಿ ಕ್ಲಿಕ್ಕಿಸಿ


ಇಂತಿ 

ಅರವಿಂದ 

ಕವನ ಸಂಕಲನ : ಅನುತ್ತರ - ನೀರೊಳಗೆ ಡ್ರಾಗನ್ ಮತ್ತು ಮಿಣುಕುಹುಳ

 ಆತ್ಮೀಯರೇ


ಹಿಂದಿನ ಹಲವು ವರ್ಷಗಳ ಕಾಲ ನಾನು ಬರೆದ ಕವನಗಳನ್ನು ಒಟ್ಟುಗೂಡಿಸಿ ಕವನ ಸಂಕಲನವನ್ನು ಪ್ರಕಟಿಸುತ್ತಿದ್ದೇನೆ. ಇಲ್ಲಿರುವ ಕವನಗಳೆಲ್ಲ ಬ್ಲಾಗಿನಲ್ಲಿ ಈಗಾಗಲೇ ಪ್ರಕಟಿಸಿರುವವು ( ಕಾವ್ಯ ಹಾಗು ನೀರೊಳಗಿನ ಡ್ರಾಗನ್). ಓದಿ ನಿಮ್ಮ ಅನಿಸಿಕೆ ತಿಳಿಸಿ. ಒಂದು ಸಂಕಲನ ನನ್ನ ಮಟ್ಟಿಗೆ ಒಂದು ಘಟ್ಟ ಮುಗಿದಂತೆ. ಹಿಂದಿನ ಹಲವು ನೋಟಗಳು, ಪ್ರಶ್ನೆಗಳು ಮುಗಿದಂತೆ. ಹಾಗೆ ಮುಗಿದದ್ದಕ್ಕೆ ಇಲ್ಲಿನ ಕಟ್ಟು. ಇದು ನನ್ನ ಎರಡನೇ ಕವನ ಸಂಕಲನ


ಒಂದಿಷ್ಟು ಮಾತು



  ಒಂದು ದಿನ ಬೆಳಗಾದಾಗ ಶ್ರೀ ಗುರು  ಗಾಬರಿಯಿಂದ  ಎಬ್ಬಿಸಿದ, ಏಳು ಏಳು ಎನ್ನುತ್ತಾ. ಎದ್ದವನೇ ಕೂರು ಅಂದ. ಕೂತೆ. ಬೆನ್ನಿಗೆ ಸುಮ್ಮನೆ ಹೊಡೆಯುತ್ತಲೇ ಇದ್ದ. ನಡಿ ಇನ್ನು ಎಂದು ಬಿಟ್ಟು ಹೋದ.    


  ಇಲ್ಲಿ ಇರುವವು ನನ್ನ ಜೊತೆಗೆ ಬಂದ, ಜೊತೆಗೆ ಇದ್ದ ಮಾತುಗಳು ಹಾಗು ಮಾತುಗಳ ನಡುವಿನ ಮೌನ. ಅದೆರಡನ್ನೂ ಮಂತ್ರವಾಗಿಸುವ ನೋವು - ನಲಿವು.   ತಿರುಗಿ ನೋಡಿದಾಗ ಅವೆಲ್ಲವೂ ನನ್ನ ಬಿಟ್ಟು  ಬಿಡಿಸಿ  ಹೋಗಿತ್ತು.  


ಅನುಭವಕ್ಕೆ ಸ್ಪಂದಿಸಿದ ಎಲ್ಲರಿಗೂ, ಎಲ್ಲಕ್ಕೂ  ಧನ್ಯವಾದಗಳು


ಕವನಗಳಿಗೆ ಇಲ್ಲಿ ಕ್ಲಿಕ್ಕಿಸಿ - 


ಇಂತಿ 

ಅರವಿಂದ