ಚಿಕ್ಕೋನಿದ್ದಾಗ
ನಾ ಬರೆದ
ಅಪ್ಪ,
ಅಮ್ಮ, ಮನೆಯ
ಚಿತ್ರಗಳನ್ನ
ನನ್
ಹುಡುಗೀಗೆ ಇಂದೇ ತೋರಿಸ್ತಿದ್ದೆ.
ಈಗ
ತನ್ನ
ಚಿತ್ರ ಬರಿ ಅಂತಾಳೆ,
ಬರೆಯೋಕ್ಕಾಗುತ್ತ?
ನಾ ಕವಿ
ಅಂತ ಗೊತ್ತಾಗಿ
ಕವನ
ಬರೆಯೋದು ಕಲಿಸು ಅಂತ
ರಚ್ಚೆ
ಹಿಡಿದಿದ್ದಾಳೆ.
ನನ್
ಹುಡುಗಿ ಬಸುರಿ ಈಗ
ತಾ ಹೆರುವಾಗ
ಪಡೋ
ನೋವನ್ನ
ಕವನ
ಆಗಿಸ್ಬೇಕಂತೆ.
ಸುದ್ದಿ
ಮುಟ್ತು
ನನ್
ಹುಡುಗೀಗೆ ಮಗೂನಂತೆ
ನನ್ನೇ
ಹೋಲುತ್ತಂತೆ
ನನ್ನ
ಮಗು
(ಈ ಕವನಾನ
ನನ್ ಹುಡುಗೀಗೆ ಕೊಟ್ಟೆ)
ಈ ಕವಿಗಳು ಏನೇನೋ ಬರಿತಾರಪ್ಪ
ಪ್ರತ್ಯುತ್ತರಅಳಿಸಿನಿಮ್ಮ ಲೇಖನಿಯಿಂದ ಸಶಕ್ತ ಸಾಹಿತ್ಯ ನಿರ್ಮಾಣವಾಗಲಿ ಎಂದು ಹಾರೈಸುತ್ತೇನೆ.
ಪ್ರತ್ಯುತ್ತರಅಳಿಸಿಅತ್ಯುತ್ತಮ
ಪ್ರತ್ಯುತ್ತರಅಳಿಸಿಮಹರಾಯರೇ, ನಿಮ್ಮ ಕಾವ್ಯದ ಇಷ್ಟಿಯಲ್ಲಿ 'ಸೃಷ್ಟಿ 'ಯ ಲಯವಾಗಿ ಹೊಸತೇ ಒಂದು 'ಸೃಷ್ಠಿ'ಯಾಗಿದೆಯಲ್ಲಾ!
ಪ್ರತ್ಯುತ್ತರಅಳಿಸಿಇಲ್ಲಿ ಸ್ವಲ್ಪ ಗಮನ ಹರಿಸಿ : "http://sallaap.blogspot.in/2012/08/blog-post_20.html"
ಮಾನ್ಯರೆ,
ಅಳಿಸಿನನ್ನ ತಪ್ಪಿನ ಬಗ್ಗೆ ತಿಳಿಹೇಳಿದ್ದಕ್ಕೆ ಧನ್ಯವಾದಗಳು.... ಈಗಲೆ ಸರಿಪಡಿಸಿದ್ದೀನಿ.....