ಅದೇಕೆ ಸಮುದ್ರದ ಎದುರು ನಿಲ್ಲುತ್ತೀಯ ಎಂಬುದಾಗಲಿ
ಅದೇಕೆ ಅದನ್ನೇ ನೋಡುತ್ತಿರುತ್ತೀಯ ಎಂಬುದಾಗಲಿ
ತಿಳಿಯುವುದೇ ಇಲ್ಲ.
ನಾವು ಒಟ್ಟಿಗೆ ಕೂತಿರುತ್ತಿದ್ದ
ಎಲೆ ಇಲ್ಲದ ಆ ಒಂಟಿ ಮರ
ಈಗಲೂ ಅಲ್ಲೇ ಇದೆ
ಈ ಬಾರಿ ನೀನು ಸೀಮಂತಕ್ಕೆ ಬಂದಾಗ
ಸಿಗುತ್ತೀಯ?
ಒಟ್ಟಿಗೆ ಮರಕ್ಕೆ ಒರಗಿ ಕೂತು ಸಮುದ್ರ ನೋಡುವ
ಸಮುದ್ರದ ದಂಡೆಯಲ್ಲಿದ್ದೂ ಯಾಕೆ ಈ ಮರದಲ್ಲಿ ಎಲೆಗಳೆ ಇಲ್ಲ ಎಂಬುದು
ತಿಳಿಯುವುದೇ ಇಲ್ಲ
ತೇಟ್ ನಿನ್ನಂತೆ.....
kelavomme uttaragaliginta baree prashnegale aapta annistave sir...
ಪ್ರತ್ಯುತ್ತರಅಳಿಸಿಧನ್ಯವಾದಗಳು......
ಅಳಿಸಿಪ್ರಶ್ನೆಗಳೊ ಅಥವಾ ಉತ್ತರಗಳೋ, ಸಂಗತಿಗಳು ಆಪ್ತವಾಗುವುದು ಮುಖ್ಯ ಅಷ್ಟೆ.....