........


ಮಣ್ಣ
ತಂದು ಗುಡ್ಡೆ ಮಾಡಿ
ಒಂದೆರೆಡು ಬಾರಿ ಕುಟ್ಟಿ
ನೀರು ಹಾಕಿ
ಕಣ್ಣ ಹುಬ್ಬು ತೀಡಿದರೆ
ಗಣೇಶ,  ದೇವರು ಸಿದ್ಧ 
ಎಷ್ಟು ಸುಲಭ,  ದೇವರು

ನನ್ನದೊಂದೇ ಫಿರ್ಯಾದು
ಎಷ್ಟೇ ಚಂದವಾಗಿ ತೀಡಲಿ
ನೀರಿಗಾಕಿದಾಗ ಕರಗುತ್ತೆ
ಮತ್ತೇ ಮಣ್ಣಾಗುತ್ತೆ
ದೇವರೂ ಸಹ

5 ಕಾಮೆಂಟ್‌ಗಳು:

 1. ನಿಜವಾದ ಮಾತು, ಎಷ್ಟು simple ಆಗಿದೆ ನಿನ್ನ ಆಲೋಚನೆ!!

  ಪ್ರತ್ಯುತ್ತರಅಳಿಸಿ
 2. ದೇವ ಮಣ್ಣೊಳಗೋ
  ಮಣ್ಣು ಮೂರ್ತಿಯೊಳಗೋ
  ಮಣ್ಣು ಮೂರ್ತಿಗಳು ಕಣ್ಣೊಳಗೆ
  ದೇವ ನಿನ್ನ ಬುದ್ಧಿ ಆಕೃತಿಯೊಳಗೋ
  ಇಲ್ಲದೆಡೆ ಪ್ರಜ್ಞೆಗೆ ಸಾಕ್ಷಿಯಾರೋ ಅರವಿಂದ ಕವನ.
  ರಘುನಾಥ

  ಪ್ರತ್ಯುತ್ತರಅಳಿಸಿ
 3. ಹೌದು ಸುಲಭ ಹಾಗೆ
  ಮೃಣನ್ಮಯ 'ನ' ಅಪೇಂಡಿಕ್ಸು
  ಕಳಚಿ ಕಾವ್ಯವಾಗೆ ಮೃಣ್ಮಯ!
  ಬಂದುಬಿಡುವ ಚಿನ್ಮಯ!!
  ಕೈ ಕೆಸರಾಗೆ ಬಾಯ್ಮೊಸರು!!!

  ಪ್ರತ್ಯುತ್ತರಅಳಿಸಿ