೦೧.
ಹತ್ತಿರ
ಇನ್ನೂ ಹತ್ತಿರ
ಕುರುಡನೊಬ್ಬನನ್ನ ಪ್ರತಿಪಲಿಸಿದೆ
ನನ್ನೀ ಮೌನದ ಕಣ್ಣೀರ ಹನಿ
ಹತ್ತಿರ
ಇಷ್ಟು ಹತ್ತಿರ
ನನ್ನ ಕಣ್ಣೀರನ್ನ ಅವನ ಕಣ್ಣಲ್ಲಿರಿಸುವೆ
ನಾವಿಬ್ಬರೂ ನೋಡಬಹುದೆಂದು
೦೨.
ಎಲ್ಲವೂ ಇದ್ದಂತೆಯೇ ಇತ್ತು
ನನ್ನ ಕೈ ತೆರೆದೆ ನೀ ಅಲ್ಲಿದ್ದೆ
ಹಾಗೂ ಎಲ್ಲವೂ ಇದ್ದಂತೆಯೇ ಇತ್ತು
ಈ ಬಾರಿ ಮಾತ್ರಾ
೦೩.
ಆ ಕಿಟಕಿ
ಹಾಗೂ ನನ್ನೀ ಟೇಬಲ್ಲಿನ ಮೇಲೆ ನಿನ್ನೆರೆಡು ಮಲ್ಲಿಗೆ ಹೂವು
ಹಾಗೂ ಈ ಬಾರಿ ಆ ಹಕ್ಕಿ,
ಈ ಬಾರಿ ಮಾಂಸ ರೆಕ್ಕೆಗಳೊಟ್ಟಿಗೆ
೦೪
ಅಸ್ಪಷ್ಟ ಪದಗಳ
ಪಯಣಿಗ
ಭದ್ರವಾಗಿ ಕೈಯಲ್ಲಿಡಿದಿದ್ದಾನೆ
ಒಡೆದ ಗಾಜನ್ನ
ಎಲ್ಲವೂ ಮುಖಾಮುಖಿಯಿಂದ ಹುಟ್ಟಿದ್ದು
೦೫
ಹಾಗೂ ಇವೆಲ್ಲವೂ ಬದುಕನ್ನು ಬೀಳಿಸುವವು
ಇದರೊಟ್ಟಿಗೆ ಎಲ್ಲವನ್ನೂ ಸುಡುವೆವು
ಅರ್ಪಣೆಯಿದು
ನೆನಪಿನ ದಹನಕಾಂಡಕ್ಕೆ
ನನಗೆ ಗೊತ್ತು ಇದು ಈ ರೀತಿಯದ್ದಾವುದೂ ಅಲ್ಲ
ಆದರೂ ಇದಾಗಿ ಇರುವುದು ಹೇಗೆ ಇದಾವುದಕ್ಕಲ್ಲದಿದ್ದರೂ
ಹ್ಯುಗೊ ಮುಜಿಕರ ಕವನಗಳು ಅನುಭವಗಳನ್ನು ಅತ್ಯಂತ ಸಾಂದ್ರವಾಗಿ ಪ್ರಕಟಪಡಿಸುತ್ತವೆ. ಹಾಗಾಗಿ ಕೆಲವನ್ನು ಇಲ್ಲಿ ಅನುವಾದಿಸಿದ್ದೇನೆ. ಇಲ್ಲಿರುವುದೆಲ್ಲವೂ ಬಿಡಿಕವನಗಳು. ಮುಜಿಕರನ್ನು ಪರಿಚಯಿಸಿದ ಹೆಚ್. ಎಸ್. ಶಿವಪ್ರಕಾಶರಿಗೆ ಧನ್ಯವಾಗಳು. ಅನುವಾದದಲ್ಲಿ ಅಶ್ವಿನಿ ಹಾಗು ಶಿವಪ್ರಕಾಶರ ಸಹಾಯವನ್ನು ನೆನೆಯುತ್ತೇನೆ.
ಮುಜಿಕ ಅವರ ಬಗೆಗೆ ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ