ಆತ್ಮೀಯರೇ,
ಹಿಂದಿನ ಹಲವು ವರ್ಷಗಳ ಕಾಲ ನಾನು ಬರೆದ ಕವನಗಳನ್ನು ಒಟ್ಟುಗೂಡಿಸಿ ಈ ಕವನ ಸಂಕಲನವನ್ನು ಪ್ರಕಟಿಸುತ್ತಿದ್ದೇನೆ. ಇಲ್ಲಿರುವ ಕವನಗಳೆಲ್ಲ ಬ್ಲಾಗಿನಲ್ಲಿ ಈಗಾಗಲೇ ಪ್ರಕಟಿಸಿರುವವು ( ಕಾವ್ಯ ಹಾಗು ನೀರೊಳಗಿನ ಡ್ರಾಗನ್). ಓದಿ ನಿಮ್ಮ ಅನಿಸಿಕೆ ತಿಳಿಸಿ. ಒಂದು ಸಂಕಲನ ನನ್ನ ಮಟ್ಟಿಗೆ ಒಂದು ಘಟ್ಟ ಮುಗಿದಂತೆ. ಹಿಂದಿನ ಹಲವು ನೋಟಗಳು, ಪ್ರಶ್ನೆಗಳು ಮುಗಿದಂತೆ. ಹಾಗೆ ಮುಗಿದದ್ದಕ್ಕೆ ಇಲ್ಲಿನ ಈ ಕಟ್ಟು. ಇದು ನನ್ನ ಎರಡನೇ ಕವನ ಸಂಕಲನ.
ಒಂದಿಷ್ಟು ಮಾತು :
ಒಂದು ದಿನ ಬೆಳಗಾದಾಗ ಶ್ರೀ ಗುರು ಗಾಬರಿಯಿಂದ ಎಬ್ಬಿಸಿದ, ಏಳು ಏಳು ಎನ್ನುತ್ತಾ. ಎದ್ದವನೇ ಕೂರು ಅಂದ. ಕೂತೆ. ಬೆನ್ನಿಗೆ ಸುಮ್ಮನೆ ಹೊಡೆಯುತ್ತಲೇ ಇದ್ದ. ನಡಿ ಇನ್ನು ಎಂದು ಬಿಟ್ಟು ಹೋದ.
ಇಲ್ಲಿ ಇರುವವು ನನ್ನ ಜೊತೆಗೆ ಬಂದ, ಜೊತೆಗೆ ಇದ್ದ ಮಾತುಗಳು ಹಾಗು ಮಾತುಗಳ ನಡುವಿನ ಮೌನ. ಅದೆರಡನ್ನೂ ಮಂತ್ರವಾಗಿಸುವ ನೋವು - ನಲಿವು. ತಿರುಗಿ ನೋಡಿದಾಗ ಅವೆಲ್ಲವೂ ನನ್ನ ಬಿಟ್ಟು ಬಿಡಿಸಿ ಹೋಗಿತ್ತು.
ಅನುಭವಕ್ಕೆ ಸ್ಪಂದಿಸಿದ ಎಲ್ಲರಿಗೂ, ಎಲ್ಲಕ್ಕೂ ಧನ್ಯವಾದಗಳು.
ಕವನಗಳಿಗೆ ಇಲ್ಲಿ ಕ್ಲಿಕ್ಕಿಸಿ -
ಇಂತಿ
ಅರವಿಂದ