ಭಸ್ಮಾರತಿ



ಶಿವನೆಂಬುದೊಂದಕ್ಷರ  

ಭಗ ಭಗ ಸುಡುವ ಅಕ್ಷರ  

ನೋಡಲ್ಲಿ  ಮಣಿಕರ್ಣಿಕದ 

ಘಾಟಿನಲ್ಲಿ  ಘಮದಲ್ಲಿ  

ಸ್ಮಶಾನ  ಶಂಕರ ತಟದಲ್ಲಿ

ಸಂಕರ  ಹೊತ್ತು ತಿರುಗಿತಿರುಗಿ

ಆಹಾ ಅಸ್ತವೇ!!!

ಕಪ್ಪು ಶಿಲೆಯೇ!!!

ಕರ್ಕಶವೇ! ಸಮ್ಮಿಲನದಾದಿನಾದವೆ 

ಇಲ್ಲೇ, ಅದೂ  ಉರಿದಿದೆ ಇಲ್ಲೇ

ಹರಿದಿದೆ, ತಿರುಗಿ ತಿರುಗಿ

ಅದೋ  ನೋಡು ಆದಿಜ್ವಾಲೆ

ಮೊದಲ ಮುಖಕ್ಕೆ ತಾಕಿದ ಮೊದಲ ಬೆಂಕಿ

ಉರಿಯುತ್ತಲೇ ಇದೆ ಇನ್ನೂ 

ಹರಿದ ಮುಖಗಳ ರಾಶಿಯ ದಾಟಿ ದಾಟಿ  

ಇಳಿದು ನೋಡುಉರಿದು ನೋಡು 

ಎಂದೆನ್ನುತ್ತಲೇ 

ಮೈಯಿಗೆ ತುಪ್ಪ ಸುರಿದು ದಬ್ಬಿದ 

ಶ್ರೀಗುರು ಅಭಿಧಾ 

ಮೈಯೆಲ್ಲಾ ಉರಿ, ಗುರುವೇ ಸುಡುತ್ತಿದೆ

ನೋಡು! ಆದಿ  ಮುಖವ

ಆದಿ  ಮುಖಕ್ಕೆ ಸ್ಪರ್ಶಿಸಿದ ಅನಾದಿ ಮುಖವ 

  ಸ್ಪರ್ಶದ ಸ್ಪಂದವ

ಸುಟ್ಟ ಮೇಲೇನೂ ಇಲ್ಲ ಗುರುವೆ

ಸುಟ್ಟ ಮೇಲೇನೂ ಉಳಿಯಲೇ ಇಲ್ಲ ಗುರುವೆ

ಮುಖ್ಯವಾವುದು ಇಲ್ಲ 

ಆದಿಯೂ ಇಲ್ಲ 

ಅನಾದಿಯು ಇಲ್ಲ

ಅಂತ್ಯವೂ ಇಲ್ಲ

ಗುರುವೇ, ಶಿವನಕ್ಷರವಲ್ಲ 

ಮಹಾಕಾಲನ  ಭಸ್ಮಾರತಿ”   


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ