ಏನಾಗಿದೆ ನಮಗೆ....?

ಶ್ರಿಪಡ್ರೆ ಯವರ ಲೇಖನವನ್ನ ಮೊನ್ನೆ ಓದಬೇಕಾಯಿತು.(ಉದಯವಾಣಿ ಏಪ್ರಿಲ್ ೨೮) ನಮ್ಮ ಜನಕ್ಕೆ, ಬುದ್ದಿಜೀವಿಗಳಿಗೆ, ಆದ್ಯಾತ್ಮಿಕ ವ್ಯಕ್ತಿಗಳಿಗೆ, ಸಾಹಿತಿಗೆಳಿಗೆ ಏನಾಗಿದೆ ಎಂಬೋ ಪ್ರಶ್ನೆ ಅವ್ರಲ್ಲಿ ಇತ್ತು. ಏಕಿಂತಸ ಸಂವೇದನಾ ರಹಿತ ಸಮಾಜ ಏರ್ಪಟ್ಟಿದೆ ಎಂಬೋ ಬೇಸರ, ಕಾಳಜಿ ಎಲ್ಲೋ ಸ್ವಲ್ಪ ನೋವು ಬೆರೆತ ದ್ವನಿ ಅವರಲ್ಲಿ ಇತ್ತು. ಅದೇ ಪ್ರಶ್ನೆ ನನ್ನಲ್ಲೀ ಇದ್ದಿದ್ದರಿಂದ ಅದೇ ಪ್ರಶ್ನೆಯನ್ನ ಮತ್ತೇ ಇಲ್ಲಿ ಕೇಳಬೇಕೆನಿಸುತ್ತಿದೆ. ಕೇಳಲು ಕಾರಣವೂ ಇದೆ, ಅವರು ಬರೆದ ನಂತರವೂ ಅಂತಹ ಯಾವುದೇ ಪ್ರತಿಕ್ರಿಯೆ ಕಂಡುಬಂದಿಲ್ಲ. ಶ್ರೀ ಪಡ್ರೆ ಯವರು ಬರೆದ ನಂತರವೂ ಪ್ರತಿಕ್ರಿಯಿಸದಷ್ಟು ಬಿಡುವಿಲ್ಲದೇ ಹೋಗಿರೋ ನಮ್ಮ ಸಮಾಜದ ಮಹಾನ್ ವ್ಯಕ್ತಿಗಳಿಗಾಗಿ ಇದನ್ನ ಬರೆಯಬೇಕಾಯಿತು. ಶ್ರೀಪಡ್ರೆಯವರು ಕೇಳಿದಕ್ಕೆ, ಆ " ತಮ್ಮ ತಪ್ಪಿಲ್ಲದೆಯೂ ಜೀವನ ಪೂರ್ತಿ ನರಕ ಅನುಭವಿಸುತ್ತಿರುವ ಬಡಪಾಯಿಗಳ" ಪರವಾಗಿ ಯಾರಾದರೂ "ಬುದ್ದಿಜೀವಿಗಳು" ,"ಪ್ರಗತಿಪರರು", "ಸಾಹಿತಿಗಳು""etcಗಳು"  ಸ್ಪಂದಿಸುತ್ತಾರ ಅಂತ ಕಾದಿದ್ದೇ ಬಂತು. ನನ್ನ ಕರ್ಮ. ಎಲ್ಲಿ ಎಲ್ಲೂ ಇಲ್ಲ. ಏನಪ್ಪ ಮಾಡೋದು ಅಂತ ಅನ್ನಿಸಿ ಅವರಿಗೂ ಸೇರಿ ಇದನ್ನ ಬರೆದುಬಿಟ್ಟೆ. ಎಂಡೋಸಲ್ಫನ್ ಸಂಪೂರ್ಣ ನಿಷೇದಕ್ಕೆ ಒಳಗಾಗಿರುವ ಈ ಹೊತ್ತಲ್ಲಿ ಈ ಲೇಖನ ಪ್ರಸ್ಥುತವೆಂದೇ ಅನಿಸುತ್ತಿದೆ.
"ಓ ನನ್ನ ಬುದ್ದಿಜೀವಿಗಳಿರ, ಓ ನನ್ನ ಪ್ರಗತಿಪರರ, ಓ ನನ್ನ ಕನ್ನಡದ ಕಂದಮ್ಮಗಳಿರ, ಓ ಭವ್ಯ ಕನ್ನಡದ ಮಹಾನ್ ಲೇಖಕರಿರ, ಕವಿಗಳ, ಸಾ......ಹಿ......ತಿ.....ಗ   ಳಾ..... ಕನ್ನಡವನ್ನೂ ಕರ್ನಾಟಕವನ್ನೂ ಹೆಗೆಲಮೇಲೆ ಹೊತ್ತೂ ಹೊತ್ತೂ ಹೊತ್ತೂ ಜೀವನವನ್ನೆಲ್ಲಾ ಸವೆಸಿರುವ ಮಹಾನ್ ವ್ಯಕ್ತಿಗಳಿರ, ಎಲ್ಲಿದ್ದೀರಿ ಸ್ವಾಮೀ, ಎಲ್ಲಿದ್ದೀರಿ? ಅಯ್ಯಾ ಎಲ್ಲಿದ್ದೀರಿ ತಾವು? ಇದ್ದೀರ ಸ್ವಾಮೀ? ಮನೆಹೊತ್ತಿ ಉರಿದೊಡೆ ನಿಲಬೊಹುದಲ್ಲದೆ ಧರೆ ಹೊತ್ತಿ ಉರಿದೊಡೆ ನಿಲಬೊಹುದೆ, ಎಂಬೋ ಕವನಕ್ಕೆ ವ್ಯಾಖ್ಯಾನ, ವಿಮರ್ಶೆ ಬರೆಯುತ್ತಿದ್ದೀರ. ಒಳ್ಳೆಯದು ಒಳ್ಳೆಯದು. ಓ ಕನ್ನಡಾಂಬೆ ನಿನ್ನ ಬುದ್ದಿಜೀವಿ, ಪ್ರಗತಿಪರ ಮಕ್ಕಳು, ಸಾಹಿತಿಗಳು ಕಾಣುತ್ತಿಲ್ಲ ತಾಯೆ. ಹುಡುಕಿಕೊಡಿ ಎಂದು ಪೋಲೀಸರಬಳಿಗೆ ಹೋಗಬೇಕೇನಮ್ಮ? ಹೇಳು ತಾಯೆ ಹೇಳು...? ಏನೆಂದೆ ತಾಯೆ, ಎಲ್ಲಿ ಹುಡಿಕಿದೆಯೆಂದು ಕೇಳಿದೆಯ..? ಏತಕ್ಕೆ ಎಂದು ಕೇಳಿದೆಯ...? ಹೇಳುತ್ತೇನೆ ತಾಯೆ, ಕೇಳುವಂತವಳಾಗು. ತಮ್ಮದಲ್ಲದ ಕೃತ್ಯಕ್ಕೆ ಅಮಾಯಕ ಮಕ್ಕಳು ಸಾಯಲಾರದೆ ಬದುಕಲೂ ಆಗದಂತಹ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ, ಅವರಿಗಾಗಿ ಸ್ಪಂದಿಸಲು ಕೇಳಿದ್ದು. ಏನು ಮಾಡೋಣ ನೀನೇ ಹೇಳು. ನೀನೂ ಮೌನವಾಗಿಹೋದೆಯೇನಮ್ಮ......?"

ಎಂಡೋಸಲ್ಫನ್ ಎಂಬೋ ಮಾರಿಯಬಗ್ಗೆ ನಾನು ಮತ್ತೇ ಹೇಳುವ ಅವಶ್ಯಕತೆ ಇಲ್ಲ. ಶ್ರೀ ರವೀಂದ್ರನಾಥ ಶಾನುಭಾಗರು ತರಂಗದಲ್ಲಿ ಎಂಡೋಸಲ್ಫನ್ ದುರಂತದಬಗ್ಗೆ ಹಲವು ವೈಜ್ಞಾನಿಕ ಪುರಾವೆಗಳೊಂದಿಗೆ ವಿವರಿಸಿದ್ದಾರೆ(ತರಂಗ ಮಾರ್ಚ್ ೨೪, ಮಾರ್ಚ್ ೩೧ ರ ಸಂಚಿಕೆ). ಇಲ್ಲಿ ಬಂದು ಆ ಮಕ್ಕಳನ್ನ ನೋಡಬೇಕು, ಅವರ ಕಥಗಳನ್ನ ತಿಳಿದರೆ ಸಾಕು ಸಾಮಾನ್ಯ ಮನುಷ್ಯನಿಗೂ ನೋವಾಗುತ್ತೆ. ಆದರೆ ನಮ್ಮ ಜನಕ್ಕೆ ಏನಾಗಿದೆ? ಏನೂ ಪ್ರತಿಕ್ರಿಯೆಯೇ ಇಲ್ಲ. ಏನೇನೂ ಇಲ್ಲ. ಇದು ಸತ್ಯ.. ಕನಿಷ್ಠ ಸಾಮಾಜಿಕ ಪ್ರಜ್ಞೆಯನ್ನೂ ತೋರದಂತೆ ಇದ್ದು ಬಿಟ್ಟಿರುವ ಇವರಿಗೆಲ್ಲ ಏನೆನ್ನಬೇಕೋ ತಿಳೀತಿಲ್ಲ.

ಸ್ವಲ್ಪ ನೆನಪಿಸಿಕೊಳ್ಳಿ ನಮ್ಮಲ್ಲಿ ಎಂತೆಂತಹ ವಿಷೆಯಗಳಿಗೆ ಪುಟಗಟ್ಟಲೆ, ಪುಸ್ತಕಗಳಗಟ್ಟೆಲೆ, ಚರ್ಚೆಯಾಗಿದೆ ಅಂತ. ಕಮ್ಮಟಗಳು, ಪ್ರತಿಬಟನೆಗಳು.  ಅದ್ಯಾವುದೂ ತಪ್ಪು ಅಂತ ಅಲ್ಲ. ಆದರೆ ಇಲ್ಲಿ ಇಡೀ ಜೀವಿಗಳೇ ನಿರ್ನಾಮವಾಗುತ್ತಿದ್ದಾರೆ. ದಕ್ಷಿಣಕನ್ನಡದ ಈ ಊರಗಳಲ್ಲಿರುವ  ಭಾದಿತರನ್ನ ನೋಡಬೇಕು, ಕರುಳು ಕಿತ್ತು ಬರುತ್ತೆ. ಆದರೆ ಇದರ ಬಗ್ಗೆ ಮಾತನಾಡುವವರೇ ಇಲ್ಲ. ಟಿಪ್ಪು ಕನ್ನಡಪ್ರೇಮಿಯೋ ಅಲ್ಲವೋ, ಆವರಣ ಕಾದಂಬರಿಯೂ ಅಲ್ಲವೋ, ಕವಲು ಕಾದಂಬರಿ ಎಷ್ಟು ಮುಖ್ಯ, ಬೈರಪ್ಪ ಕಾದಂಬರಿಕಾರನೋ ಅಲ್ಲವೋ, ಕನ್ನಡ ಸಮ್ಮೇಳನವನ್ನ ಇವರು ಉದ್ಘಾಟಿಸಬೇಕೋ ಬೇಡವೋ? ಇರಲಿ, ಆದರೆ ಟಿಪ್ಪು ಕನ್ನಡ ಪ್ರೇಮವಿರಲಿ, ಆವರಣವಿರಲಿ, ಕವಲಿರಲಿ, ಬೈರಪ್ಪ ಇರಲಿ ಇದರಿಂದ ಯಾರಿಗೂ ನಯಾ ಪೈಸೆ ಉಪಯೋಗವಾಗಲೀ, ಹಾನಿಯಾಗಲಿ ಕಂಡೀತ ಇಲ್ಲ. ಆದರೆ ಈ ಒಂದು ಎಂಡೋಸಲ್ಫನ್ ಎಂಬೋ ಮಾರಿಯಿಂದ ಜನಗಳು ಸಾಯುತ್ತಿದ್ದಾರೆ, ಬದುಕು ದುರ್ಭರವಾಗಿಹೋಗಿದೆ. ಅಯ್ಯಾ ಒಮ್ಮೆ ನಿಮ್ಮ ಮನೆಗಳಲ್ಲಿ ಇಂತಹುದೇ ಮಕ್ಕಳು ಹುಟ್ಟಿದ್ದರೆ ನಿಮ್ಮ ಪರಿಸ್ಥಿತಿ ಹೇಗಿರುತ್ತಿತ್ತು? ಒಮ್ಮೆ ಆಲೋಚಿಸಿ, ಸ್ಪಂದಿಸೋ ಕನಿಷ್ಟ ಪ್ರಯತ್ನವನ್ನಾದರೂ ಮಾಡೋಣವಲ್ಲವೆ....?   ಅನುಕಂಪವಾದರೂ ಬೇಡವ? ಆ ಜನಗಳ ಪರವಾಗಿ ಒಂದೇ ಒಂದು ಧ್ವನಿಯನ್ನ ನೀಡಲಾರದಷ್ಟು ನೀರಸವಾಗಿಹೋಗಿದ್ದಾರ ನಮ್ಮ ಪ್ರಜ್ಞಾವಂತ  ನಾಗರೀಕರು ಹಾಗು ಸಾ... ಬು... ಪ್ರ.....     ಇವನ್ನೆಲ್ಲಾ ನೋಡೋವಾಗ ನಮ್ಮ ಮೇಡಮ್ ಒಬ್ಬರು ಹೇಳೋ ಮಾತು ಸತ್ಯ ಅಂತ ಅನ್ನಿಸುತ್ತೆ. ಅವರು ಹೇಳುತ್ತಿದ್ದರು " ಈ ಕವಿಗಳಿಂದ ನಮ್ಮ ಸಾಹಿತಿಗಳಿಂದ ಏನೂ ಉಪಯೋಗ ಇಲ್ಲ " ಅಂತ. ಎಲ್ಲೋ ಯಾಕೋ ನಿಜ ಇರ್ಬೋದ ಅಂತ ಅನ್ನಿಸೋಕ್ಕೆ ಶುರು ಆಗಿದೆ.

"ಶ್ರೀಪಡ್ರೆ ಸರ್, ಕ್ಷಮಿಸಿ ನಾವು ವಿದ್ಯಾವಂತರು, ಬುದ್ದಿಜೀವಿಗಳು, ಪ್ರಗತಿಪರರು, ವಿಚಾರವಂತರು, ವಿವೇಕವಂತರು, etcವಂತರು. ಆದ್ದರಿಂದ ನಮಗಾಗಿಯೇ ಅಕ್ಯಾಡೆಮಿಗಳಿವೆ, ವಿಶ್ವವಿದ್ಯಾಲಯಗಳಿವೆ, ಕಾಲೇಜುಗಳಿವೆ, ಸಂಘಟನೆಗಳಿವೆ, ವೇದಿಕೆಗಳಿವೆ. ಅದೇಗೆ ಅವನ್ನೆಲ್ಲಾ ಬಿಟ್ಟು ಬರೋದು ನೀವೇ ಹೇಳಿ? ನಾವಿಲ್ಲದೇ ಇದ್ದರೆ ಕನ್ನಡದ ಸ್ಥಿತಿಯೇನು? ಭಗವಂತ, ಕ್ಷಮಿಸಿ. ಅಯ್ಯೋ ನೆನಪಿಸಿಕೊಂಡರೇನೇ ಭಯವಾಗುತ್ತದೆ. ನೀವೇ ಹೇಳಿ, ಕನ್ನಡದ ಗತಿಯೇನಾದೀತು. ಅಕಟಕಟ. ಇಲ್ಲಿ ನಮಗಾಗಿ ತಿರುಗೋ ಛೇರಿದೆ, ಮೇಲೆ ಫ್ಯಾನಿದೆ, ಏಸಿ ಇದೆ, ತಿರುಗಲು ಸರ್ಕಾರಿ ಕಾರಿದೆ. ಅದನ್ನೆಲ್ಲ ಬಿಟ್ಟು, ಛೆ ಛೆ ಎಂತ ಮಾತ ಎಂತ ಮಾತು. 
ಶ್ರೀ ಪಡ್ರೆ ಯವರೆ, ಈಗ ನಾನು ಎಂಡೋಸಲ್ಫನ್ ಎಂತಲೋ, ಅದರ ಸಂತ್ರಸ್ಥರೂ ಎಂತಲೋ ಮಾತನಾಡಿದೆ ಎನ್ನೋಣ, ಅಲ್ಲ ಅಂದ್ಕೊಳೋಣ.,ಅದ್ರಿಂದ ಏನುಪಯೋಗ? ನಂಗೇನ್ ಲಾಭ? ಯಾವುದಾದರೂ ಸಮುಧಾಯವನ್ನ ಪ್ರತಿನಿದಿಸುತ್ತಾ ಇದ್ದೀನ?, ಇಲ್ಲ. ಅದ್ರಿಂದ ನಾವೇನಾದ್ರು ಯಾವ್ದಾದ್ರು ಪಂಗಡಕ್ಕೆ, ಗುಂಪಿಗೆ ಸೇರ್ತೇವ?, ಇಲ್ಲ. ಅದ್ರಿಂದ ಸರ್ಕಾರ ನಮ್ಮನ್ನ ಯಾವ್ದಾದ್ರು ಅಕ್ಯಾಡಮಿಗೆ ಸೇರ್ಸುತ್ತ?, ಇಲ್ಲ. ಆ ಹೋರಾಟ ಪುಸ್ತಕ ಆಗಿ ನಂಗೆ ಜನಪ್ರಿಯತೆಯನ್ನ ತಂದುಕೊಡುತ್ತ? ಇಲ್ಲ. ಹೋಗ್ಲಿ ಪ್ರತಿಭಟನೆ ಅದೂ ಇದೂ ಏನಾದ್ರು ಅಮೇರಿಕಾಕ್ಕೆ ತಲುಪತ್ತ? ಅಲ್ಲಿ ನಡೆಯೊ ಸಮ್ಮೇಳನಗಳಿಗೇನಾದರೂ ಕರಿತಾರ, ಇಲ್ಲ. ಇಷ್ಟೆಲ್ಲ ಇಲ್ಲಗಳನ್ನ ಇಟ್ಕೊಂಡು ಅದೇಗೆ ಅಲ್ಲಿ ನಾವು ಸ್ಪಂದಿಸೋದು ಸ್ವಾಮಿ, ನೀವೊಳ್ಳೆ. ಮನೇಲೋ ಏಸಿ ಸರಿ ಇಲ್ಲ, ನನ್ನ ಕೆಲಸಗಳೋ ಎಷ್ಟೋಂದು ಹಾಗೆ ಉಳಿದುಹೋಗಿದೆ, ಸಾಹಿತ್ಯ ಮರು ಚೆರಿತ್ರೆ, ಸಾಹಿತ್ಯ......., ಕನ್ನಡ........ ಎಲ್ಲಾ ಇಟ್ಕೊಂಡಿದೀನಿ. ನಂಗೆ ಬಿಡ್ವಿಲ್ಲ ಬಿಡಿ. ಶ್ರೀ ಪಡ್ರೆಯವರೆ.."
ಸಾಹಿತ್ಯ ಮನುಷ್ಯನಿಗೆ ಸ್ಪಂದಿಸೋ ಗುಣವನ್ನ ನೀಡುತ್ತದಂತೆ. ಆ ಸ್ಪಂದಿಸುವ ಮನುಷ್ಯಗುಣಕ್ಕಾಗಿಯೇ ನಮಗೆ ಸಾಹಿತ್ಯೆ ಕಲೆ ಎಲ್ಲವೂ ಬೇಕಿರುವುದು. ಆದರೆ ಇಂದೇಕೋ ಆ ಪರಿಸ್ಥಿತಿ ಕಾಣುತ್ತಲೇ ಇಲ್ಲ. ಸಾಹಿತಿ ವರ್ಗವೇ ಇಂತಹ ಒಂದು ಬೀಕರಕ್ಕೆ ಮೌನ ವಹಿಸಿ ಶರಣಾಗಿಹೋಗಿದೆ. ಪುಸ್ತಕಗಳಲ್ಲಿ, ವಿಮರ್ಶೆಗಳಲ್ಲಿ ಅಡಗಿರಬಹುದಾದ ಸಾಹಿತ್ಯಿಕ ತತ್ವ ಏನೇ ಇರಲಿ ಸಾಹಿತಿಗಿರಬೇಕಾದ ಮೂಲ ಗುಣವೆಂದರೆ ಜೀವಕ್ಕೆ ಸ್ಪಂದಿಸೋ ಮಾನವೀಯ ಗುಣ. ಮಾನವೀಯ ಸಂವೇದನೆ. ಆ ಮಾನವೀಯ ಸಂವೇದನೆಗಳಿಲ್ಲದ ಸಾಹಿತಿ ಮನುಷ್ಯನೇ ಅಲ್ಲ, ಇನ್ನು ಆತನ ಸಾಹಿತ್ಯವೆಂತು?
ನಾವು ಮನುಷ್ಯರಾಗೋದು ಯಾವಾಗ ಅಂತನಿಸುತ್ತಿದೆ. ಭಯವಾಗುತ್ತಿದೆ, ಮುಂದೆ ಏನಿದೆ ಎಂದು ಕಂಡಾಗ ಹೆದರಿಕೆ ಆಗುತ್ತಿದೆ. ಎಷ್ಟೋ ಜನರನ್ನ ಶಾಶ್ವತವಾಗಿ ಅವರ ಜೀವನವನ್ನ ಹಿಂಡಿಬಿಡುತ್ತಿರುವವರು ಒಂದು ಕಡೆಯಾದರೆ ಹಾಗೆ ಹೀರುತ್ತಿರುವುದನ್ನು ನೋಡಿಯೂ ಸುಮ್ಮನಿರುತ್ತಿರುವವರು ಮತ್ತೊಂದು ಕಡೆ. ಜೀವವನ್ನೇ ಕಾಣದೇ ಹೋಗುತ್ತಿದ್ದೇವ, ಭಯವಾಗುತ್ತೆ, ಮನುಷ್ಯನಿಗೂ ಯಂತ್ರಕ್ಕೂ ವ್ಯತ್ಯಾಸ ಇದೆಯ, ತಿಳೀತಿಲ್ಲ.
ಸಮಾಜ ಎಂದರೇನೆ ಅದು ವ್ಯಕ್ತಿ ವ್ಯಕ್ತಿಗಳ ನಡುವಿನ ಮಾನವೀಯ ಸಂಬಂದ. ಆ ಸಂಭಂದ ಛಿದ್ರವಾದಾಗ ಸಮಾಜ ವಡೆದು ಚೂರಾಗುತ್ತೆ. ಹಾಗೆ ಆಗಬಾರದು. ಕಲೆ ಸಾಹಿತ್ಯ ಆ ಮಾನವೀಯ ಗುಣಗಳನ್ನ ಒಟ್ಟುಗೂಡಿಸುವುದೇ ಆಗಿರುತ್ತದೆ. ಉಸಿರು ಕಟ್ಟಿಹೋಗಬಹುದಾದ ಸಮಯದಲ್ಲಿ ಕೂಡ ಸಾಹಿತ್ಯ-ಕಲೆ ಎಷ್ಟೋ ಬಾರಿ ಚೌತನ್ಯವಾಗಿ ಕಂಡಿದೆ. ಆದ್ದರಿಂದಲೇ ಸಾಹಿತಿ ಕಲಾವಿದ ಸಮಾಜದ ಪ್ರತಿನಿದಿಯಾಗಿ ಕಾಣುತ್ತಾನೆ. ಆ ಪ್ರತಿನಿದಿಗಳು ಮೌನ ವಹಿಸಿದರೆ ಹೇಗೆ ಎಂಬೋದು ಸಮಸ್ಯೆಯಾಗುತ್ತದೆ. ಆದ್ದರಿಂದಲೇ ಹೇಳಿದ್ದು ಇಂದು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸೋ ಅವಶ್ಯವಿದೆ ಎಂದು. 
ಬಹುಶಃ ಈ ಲೇಖನ ತುಂಬಾಜನಕ್ಕೆ ತಲುಪುವುದಿಲ್ಲ, ತಲುಪಿದವರಿಗೆ ಒಂದು ಪುಟ್ಟಮನವಿ.
ಅಯ್ಯ ಜನಗಳಿರಾ, ಬುದ್ದಿ ಜೀವಿಗಳಿರ, ವಿವೇಕಯುತವಾಗಿ ಚಿಂತಿಸೋಣ. ವಿವೇಕವಂತನ ಮೌನ ಸಮಾಜಕ್ಕೆ ಎಂದಿಗೂ ಅಪಾಯ. ಮನುಷ್ಯರಿಗಾಗಿ ಸ್ಪಂದಿಸೋಣ, ಮನುಷ್ಯರಾಗೋಣ. ಇಷ್ಟನ್ನ ಹೇಳಬೇಕೆನಿಸಿತು. ಹೇಳಿದೆ.

[ಇಲ್ಲಿನ ಕೆಲವು ಮಾಹಿತಿಗಳು ಹಾಗು ಫೊಟೋಗಳನ್ನ ಒದಗಿಸಿದವರು ಶ್ರೀ ರವೀಂದ್ರನಾಥ ಶಾನುಭಾಗರು. ಅವರಿಗೆ, ಅವರ ಕಾರ್ಯಕ್ಕೆ ವಂದನೆಗಳು]

ಇದು ಎಂಡೋಸಲ್ಫನಿನ ಶಾಶ್ವತ ನಿಷೇದದ ಬಗೆಗಿನ ಮಾಹಿತಿ. ಒದಗಿಸಿದವರು ಶ್ರೀ ರವೀಂದ್ರನಾಥ ಶಾನುಭಾಗರು.

Dear Friends,
I have received several mails asking me to explain the expression 
"Global Ban for Endosulfan".Most of the readers thought the ban would 
be implemented right away.
No It can not be done like that.What the World Forum agreed was for "Phasing  out"  
For example,Govt of India may ask the Pesticide Industries to reduce the manufacture
of endosulfan every year to the extent of 50%.
One thing is certain that the molecule will disappear with in a few year. 
But If State Govts want they can put several restrictions for its use.
Any way,Please read the following write up to know what happened on the
final day of the Convention and to get more clarity.
Regards
Shanbhag 

                                            A Global Ban for Endosulfan

·        India changes its position on endosulfan at the Stockholm Convention
·        It softens its stand and agrees that endosulfan is a health hazard.
·        It agrees to a ban on the pesticide.
·        India seeks exemption in 15 crops till such time that cheaper alternatives are worked out 
·        CSE welcomes the move and wants government to expedite phase out as health hazards are now known and accepted

The final day of the fifth Stockholm Convention – meeting held in Geneva to decide the fate of endosulfan, a persistent organic pollutant saw a different Indian position. India, which has single handedly blocked the ban on this globally accepted toxin, agreed to the inclusion of endosulfan in Annex A – a listing of globally banned pesticide under the UN’s Stockholm Convention -- without any opposition. CSE welcomes this shift in the Indian government’s position, which has now recognized the hazards of endosulfan, a pesticide, which has caused enormous human suffering in Kerala and Karnataka where it has been sprayed over cashew plantation.

In Kerala, the chief minister, V S Achuthanandan has asked for a ban on the pesticide, arguing that it has created havoc in his state. Karnataka has also banned the use of endosulfan, like Kerala. It is also clear that in other parts of the country, where this pesticide is used extensively there is growing evidence of its toxicity. In spite of these concerns, the Indian government, represented by the Ministry of Environment and Forests, had been supportive of the pesticide industry’s position that endosulfan must not be banned. The Indian government had been adamant in its position to support endosulfan since 2008 when endosulfan was first introduced in the fourth Stockholm Convention, as a persistent organic pollutant, which faced a global ban.  

CSE believes that now that India has agreed to a global ban, and has accepted that endosulfan is a poison that needs to be eliminated, it is only a matter of time before the phase out happens. CSE would like to stress that this phase-out must be expedited. It is time that the government recognizes the need to make concerted efforts towards moving to non-chemical alternatives of endosulfan. This will help keep the farmers out of the pesticide's bad health and debt trap. 

Endosulfan, an organochlorine pesticide, and known endocrine disruptor and neurotoxic is known to have created serious health concerns in Kasaragod district in Kerala and the adjoining Dakshin Kanada district in Karnataka. Over 20 years of aerial spraying on the cashew plantations in these states has left many with mental and physical disorders and the health anomalies are now being seen even in the newer generations.

For details, log on to: http://www.downtoearth.org.in ; www.cseindia.org
Or contact: Savvy Soumya Misra (9818779535) savvy@cseindia.org
Souparno Banerjee:  souparno@cseindia.org
Dr. Ravindranath Shanbhag
President,
Human Rights Protection Foundation, Udupi.

4 ಕಾಮೆಂಟ್‌ಗಳು:

 1. ಅರವಿಂದ್, ವಿಷಾನಲದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಭಾಗಿಯಾಗುವುದರಿಂದ ಯಾವ ಸವಲತ್ತುಗಳನ್ನು ತಂದುಕೊಡದೆನ್ನುವುದು ತಿಳಿದಿದೆ - ಹಾಗಾಗಿ ಎಲ್ಲ ತೆಪ್ಪಗಿದ್ದಾರೆ ಎಂದು ವಿವರಿಸಿದ ಬಗೆ ನಿಮ್ಮದೇ ಶೈಲಿ. ನನಗನ್ನಿಸುವ ಹಾಗೆ ನಾನೂ ಸೇರಿದಂತೆ ಹೆಚ್ಚಿನವರು ನಮ್ಮನ್ನು ನಾವು compartmentalization ಮಾಡ್ಕೊಂಡುಬಿಟ್ಟಿದ್ದೇವೆ. ಹಿಸ್ಟರಿಯನ್ನು ಬೋಧಿಸುವ ಮಾತನಾಡುವವನಿಗೆ ಎಂಡೋ ಬೇಡ. ನ್ಯೂಕ್ಲಿಯರ್ ಅಥವಾ ಎಸ್ಟ್ರೋನಮಿ ಬಗ್ಗೆ ಕೊರೆಯುವವನಿಗೆ ಅಥವಾ ಬರೆಯುವವನಿಗೆ ಪರಿಸರದ ಬಗ್ಗೆ ಮಾತನಾಡುವ ಹಕ್ಕಿಲ್ಲ ಇತ್ಯಾದಿ. ಹಾಗಾಗಿಯೇ ಪರಿಸರ ಪ್ರೇಮಿಗಳೆಂದೇ ಕೆಲವರನ್ನು ಚೌಕಟ್ಟಿನಲ್ಲಿರಿಸಿಬಿಟ್ಟು ಎಲ್ಲ ಉಸಾಬರಿ ಅವರಿಗೇ ಬಿಟ್ಟುಕೊಟ್ಟು ಉಳಿದ ನಾವೆಲ್ಲ ತಣ್ಣಗೆ ಕೂತು ಚಂದ ನೋಡುತ್ತಿದ್ದೇವೆ. ಪ್ರಾಯಶ: ಈ ಚೌಕಟ್ಟಿನಿಂದ ನಾವು ಹೊರ ಬರಬೇಕಾಗಿದೆ. ಇಂದು ಎಂಡೋ ನಾಳೆ ಇನ್ನಾವುದೋ - ಎಲ್ಲ ನಮ್ಮ ಸುತ್ತುಮುತ್ತಲಿನ ವಿದ್ಯಮಾನಗಳಿಗೆ ಆಗ ಸ್ಪಂದಿಸುವುದಕ್ಕೆ ಸಾಧ್ಯವಾಗುತ್ತೆ. ಅದಕ್ಕೆ ಶಿವರಾಮ "ಖಾರಂತ" ಶ್ರೇಷ್ಠರಾಗಿರುವುದು. ಏನಂತೀರಿ?

  ರಾಧಾಕೃಷ್ಣ

  ಪ್ರತ್ಯುತ್ತರಅಳಿಸಿ
 2. ಅರವಿಂದ,
  ನೀವು ಬರೆದದ್ದು ಸರಿ- ನಮ್ಮ ಸ್ಪಂದನ ನಮ್ಮ ಮನೆಯಲ್ಲಿ ಅಂಥಾ ದುರಂತ ಸಂಭವಿಸಿದರೆ ಮಾತ್ರ ,ಇಲ್ಲದಿದ್ದರೆ ನಮಗೆ ಪುರುಸೊತ್ತಿಲ್ಲ.ಪುರುಸೊತ್ತಿದ್ದವರು ಲೋಕಸೇವೆ ಮಾಡಲಿ!
  ಹೋಗಲಿ, ಪಡ್ರೆಯವರ ಲೇಖನ ನಮ್ಮ ಅರವಿಂದನನ್ನು ಬಿಸಿಯೇರಿಸಿ,ಬಿಸಿಯನ್ನ ಬ್ಲಾಗ್ಗೇರಿಸಿತಲ್ಲ? ನೋಡುವ ಪರಿಣಾಮವನ್ನು-ರಮಾದೇವಿ

  ಪ್ರತ್ಯುತ್ತರಅಳಿಸಿ
 3. ಪ್ರಿಯ ಅರವಿಂದ್
  ನಾವು ರಾಜರ ಕೈಯಲ್ಲಿ, ಬ್ರಿಟಿಷರ ಕೈಯಲ್ಲಿ ಆಳಿಸಿಕೊಂಡವರು. ಕರ್ಮ ಸಿದ್ಧಾಂತಕ್ಕೆ ಆತುಕೊಂಡವರು. ಆಡಳಿತದಲ್ಲಿ ಜನಸಾಮಾನ್ಯರ ಸಹಭಾಗಿತ್ವ ಎನ್ನುವುದು ನಮ್ಮ ಇತಿಹಾಸದಲ್ಲಿ ಬಹುಶಃ ಎಲ್ಲಿಯೂ ಕಂಡುಬರದ ಒಂದು ಕಲ್ಪನೆ. ಹೀಗಾಗಿ ಪ್ರಜಾಪ್ರಭುತ್ವವನ್ನು ಜೀರ್ಣಿಸಿಕೊಳ್ಳಲು ನಮಗೆ ಕಷ್ಟವಾಗುತ್ತಿದೆ. ಒಂದು ದೇಶದ ಇತಿಹಾಸದಲ್ಲಿ ಐವತ್ತೋ ಅರವತ್ತೋ ವರ್ಷ ಎನ್ನುವುದು ತುಂಬ ಚಿಕ್ಕ ಅವಧಿ. ಇಷ್ಟು ಚಿಕ್ಕ ಅವಧಿ ಸಾವಿರಾರು ವರ್ಷಗಳಿಂದ ಬೆಳೆದುಬಂದ ಒಂದು ಯೋಚನಾಪದ್ಧತಿಯನ್ನು ಬದಲಾಯಿಸಲು ಸಾಕಾಗುವುದಿಲ್ಲ. ಈ ಹಿನ್ನೆಲೆಯಿಂದಾಗಿಯೇ ನಮ್ಮ ಹೆಚ್ಚಿನ ಸಾಹಿತಿಗಳು, ಮತ್ತಿತರ ಬುದ್ದಿಜೀವಿಗಳು ತಮ್ಮ ಶಕ್ತಿ ತಾವರಿಯದ ಹನುಮಂತರಾಗಿಬಿಟ್ಟಿದ್ದಾರೆ. "ವಿಮರ್ಶಕರು ಶಿಖಂಡಿಗಳು" ಎಂದು ಸಾಹಿತ್ಯದಲ್ಲಿ ಒಂದು ಮಾತಿದೆ. ನಮ್ಮಲ್ಲಿ ಸಾಹಿತಿಗಳಿಗೂ ಅದನ್ನು ಅನ್ವಯಿಸಬೇಕಾಗಿ ಬಂದಿರುವುದು ನಮ್ಮ ದುರ್ದೈವ.
  ಹಾಗಿದ್ದರೆ, ಕೇರಳಕ್ಕೂ ಈ ಮಾತುಗಳು ಅನ್ವಯವಾಗಬೇಕಲ್ಲವೆ? ಕೇರಳ, ಬಂಗಾಳ ಈ ಎರಡೂ ಭಾರತದಲ್ಲಿ ಪ್ರತ್ಯೇಕವಾಗಿ ನಿಲ್ಲುವ ಎರಡು ರಾಜ್ಯಗಳು. ಎರಡೂ ಕಡೆ ಕಮ್ಯುನಿಸಂ ಪ್ರಾಬಲ್ಯ ಇರುವುದನ್ನು ಗಮನಿಸಿ. ಬಹುಶಃ ವಿದ್ಯಾಭ್ಯಾಸದ ಕಾರಣದಿಂದ ಈ ರಾಜ್ಯಗಳು ಇತರ ರಾಜ್ಯಗಳಿಗಿಂತ ಭಿನ್ನವಾಗಿ ವರ್ತಿಸುತ್ತಿವೆ.
  ಇಂಥ ಪರಿಸ್ಥಿತಿಯಲ್ಲೂ, ಇತ್ತೀಚೆಗೆ ಮಾಹಿತಿ ಹಕ್ಕಿನಂಥ ಒಂದು ಜನಪರ ಕಾನೂನು ನಮ್ಮಲ್ಲಿ ಬಂದಿದೆ ಎಂಬುದು ನನಗೆ ಅತ್ಯಂತ ಆಶ್ಚರ್ಯದ ವಿಷಯ. ಹೆಚ್ಚು ಹೆಚ್ಚು ಜನ ಇದನ್ನು ಬಳಸಿಕೊಂಡರೆ, ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಬದಲಾಗಬಹುದೆಂದು ಕಾಣುತ್ತದೆ.
  ಎಂಡೋಸಲ್ಫಾನಿನಿಂದ ಏನೇನು ಅನಾಹುತಗಳಾಗಿವೆಯೋ ಆ ಎಲ್ಲದಕ್ಕೂ ಅದನ್ನು ಅನುಭವಿಸುತ್ತಿರುವವರೂ, ಅದನ್ನು ಹೊರಗಿನಿಂದ ನೋಡುತ್ತಿರುವವರೂ, ತಮ್ಮದೇ ಆದ ಕಾರಣಗಳನ್ನು ಕಂಡುಕೊಂಡಿದ್ದಾರೆ ಎಂಬುದನ್ನು ಗಮನಿಸಿ. ಹೆಚ್ಚಿನವರು ಇದನ್ನು ನಾಗದೋಷ ಎಂದೇ ತಿಳಿದಿದ್ದಾರೆ. ಈಗಲೂ ಸಹ ನೀವು ನಾನು ಎಷ್ಟೇ ಹೇಳಿದರೂ, ಇದು ನಾಗದೋಷವೇ ಹೌದೆಂಬ ತಮ್ಮ ನಂಬಿಕೆಯನ್ನು ಬಿಟ್ಟುಕೊಡಲು ಜನ ತಯಾರಿದ್ದಾರೆ ಎಂದು ನಾನು ತಿಳಿಯುವುದಿಲ್ಲ. ಮುಸ್ಲಿಮರು, ಕ್ರಿಶ್ಚಿಯನ್ನರು ಸಹ ಇದಕ್ಕೆ ಅಪವಾದ ಅಲ್ಲ ಎಂದು ನನಗನಿಸುತ್ತದೆ. ಸಮಸ್ಯೆಗೆ ಅವರ ದೃಷ್ಟಿಯಲ್ಲಿ ಇಷ್ಟು ಸಮರ್ಪಕವಾದ ಒಂದು ಕಾರಣ ಇರುವಾಗ, ಎಂಡೋ ಸಲ್ಫಾನ್ ವಿರುದ್ಧ ಹೋರಾಡುವುದೆಂದರೆ ಅವರ ಪಾಲಿಗೆ "ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗೆ"ಯೇ. ಈ ಹೋರಾಟದಲ್ಲಿ ಯಾರಾದರೂ ಭಾಗವಹಿಸುತ್ತಿದ್ದರೆ, ಅದು ನಾಳೆ ತಮಗೆ ಸರ್ಕಾರದಿಂದ ಪರಿಹಾರವೋ ಮಾಸಾಶನವೋ ಸಿಕ್ಕೀತೆಂಬ ಕಾರಣಕ್ಕೆ ಮಾತ್ರ. ಎಷ್ಟೋ ಜನ ಪರಿಹಾರ ಸಿಕ್ಕಿದರೆ ಅದರ ಒಂದು ಅಂಶವನ್ನು ನಾಗದೋಷದ ಪರಿಹಾರಕ್ಕೆ ಬಳಸುವ ಸಾಧ್ಯತೆಯೂ ಇಲ್ಲದಿಲ್ಲ.
  ಏನೇ ಆಗಲಿ, ಸಾಹಿತಿ, ಬುದ್ದಿಜೀವಿ ಇತ್ಯಾದಿ ವರ್ಗದವರ ಬಾಲ ತಿರುಚಿದ್ದಕ್ಕೆ ನಿಮಗೆ ಅಭಿನಂದನೆಗಳು.
  ಎಚ್. ಸುಂದರ ರಾವ್

  ಪ್ರತ್ಯುತ್ತರಅಳಿಸಿ
 4. ರಾದಾಕೃಷ್ಣ ಸಾರ್
  ನೂರು ಪಾಲು ಸತ್ಯ..... ನಾನು ಇ compartmentalization ಬಗ್ಗೆ ಹಲುವು ವೇಳೆ ಭಯದಿಂದ, ಬೆರಗಿನಿಂದ ಕಂಡಿದ್ದಿದೆ. ಮೂಲತಃ ನಮ್ಮೆಲ್ಲಾ ಸಮಸ್ಯೆಗಳಿಗೆ ಕಾರಣವೇ ಈ Compartmentalization ಅಂತ ಅನ್ನಿಸುತ್ತೆ. ನಮ್ಮ ಈಗಿನ ವಿದ್ಯಾಬ್ಯಾಸ ಪದ್ದತಿ ನಮ್ಮನ್ನ ಆ ಕೂಪಕ್ಕೆ ಎಲೆದೊಯ್ದುಬಿಟ್ಟಿದೆ. ಕಂಡಿತವಾಗಿಯೂ ಈಗ "ಕಾರಂತರು" ಬೇಕಿದ್ದಾರೆ. ಆದರೆ "ಖಾರಂತರು" ಯಾರಾಗುತ್ತಾರೆ....? ಅದೇ ಪ್ರಶ್ನೆಯಾಗಿದೆ........
  Aravinda

  ಪ್ರತ್ಯುತ್ತರಅಳಿಸಿ