ಮೃಣನ್ಮಯಿ ನಚೀಕೇತರ ಪ್ರೇಮ ಸಲ್ಲಾಪ - ಕವ್ನ ಎಂಬೋ ಹುಟ್ಟು


ಒಂಟಿ,
ಸೂಜಿ ಮೊನೆ ಮೇಲೆ ನಿಂತಿದ್ದೆ.
ರಕ್ತ ಹರೀದೆ ಅನ್ಬವಿಸೋ ಯಾತನೆ.
ನೋವು, ಹತಾಷೆ, ಸೋಲು, ದಿಗ್ಭ್ರಾಂತದಲ್ಲಿ ತಲ್ಲಣಗೊಂಡಿದ್ದೆ.
ನಾ ನಿಂತಿರೋದು
ಗೊತ್ತಿದ್ದೂ
ನಿಂತಿದ್ದೆ.(ಅದು ನನ್ನ ಕರ್ಮ ಅಂತ ಅನ್ಬೇಡಿ)
ಹಕ್ಕೀನ ಸ್ವಾತಂತ್ರ್ಯದ ಪ್ರತಿಮೆಯಾಗಿಸಿ
"ಮತ್ತೆ ಹಕ್ಕಿ ಹಾರಿತು ನೋಡ"
ಎಂಬ
ಕವ್ನ ಬರ್ದ
ನನ್ನ ಹೀನ ಸ್ಥಿತಿಯಲ್ಲಿ
ಮೃಣನ್ಮಯಿಯನ್ನ ಅಪ್ಪಿಕೊಂಡೆ.
ಇಬ್ರೂ ಹಾದಿ ಬದೀಲ್ ಬಿದ್ದ ಆಕಾಶ ಮಲ್ಲಿಗೇನ
ಕಂಡು
ಅದ್ನ ಹೆಕ್ಕೋಕ್ಕೋಗಿ
ಸಲ್ಲಾಪಕ್ಕಿಳಿದ್ವು
ಅದೇ ನಚೀಕೇತ ಮೃಣನ್ಮಯಿಯರ ಪ್ರೇಮ ಸಲ್ಲಾಪ - ಕವ್ನ ಎಂಬೋ ಹುಟ್ಟು.



"ಹುಡ್ಗೀ,
ನಿನ್ನ ಹೊಕ್ಕುಳ ಕಂಡರೆ ನಂಗಿಷ್ಟ
ಮತ್ತೆ
ಹುಟ್ಟಬೇಕೆನಿಸುತ್ತೆ"

"ಆಹಾ....
ಹೊಕ್ಕುಳಿಗೊಂದು ಬಂಧವುಂಟೋ ಹುಡ್ಗ
ಆ ಬಂಧದ ಸ್ವಚ್ಛಂದವು
ನೀನಾದಾಗ
ಮತ್ತೇ
ಹುಟ್ಟುತ್ತೀ"


"ಹುಡ್ಗೀ
ನನ್ನ ಹುಚ್ಚಿನ ಪೂರಕ ಕಣೇ ನೀನು
ಹುಚ್ಚಂಗೆ ಕವ್ನ ಬರ್ಯೋ ಹಕ್ಕಿಲ್ಲ
ನಾ ಕವ್ನ ಬರ್ಯೋಲ್ಲ"

"ಹುಡ್ಗ
ನೀನ್ಯಾಕೋ ಕವ್ನ ಬರೀತಿ
ಪದ್ಗಳ ಹಂಗು
ಹೊಕ್ಕುಳಿಗಂಟಿದ ಭಾವವಿರಬೇಕಾದರೆ"


ಮೃಣನ್ಮಯಿ
ನೀನು ಪೂರ್ಣ ಬೆರಗು
ತಿಳಿವ ಹುಚ್ಚು ಹಠಕ್ಕೆ ಅಚ್ಚರಿ
ಕ್ಷಣದ ಅವಗಾಹನೆಗೆ ಆವಾಹನೆ
ದೀರ್ಘಾವಲಂಬಿತ ಪ್ರಕ್ರಿಯೆಯ ಪ್ರತಿಕ್ರಿಯೆ

ನಚೀ
ಬೆರಗಾಗೋ ನಿನ್ನ ಬೆರಗೇ ಪೂರ್ಣ
ನಿನ್ನ ಅಚ್ಚರಿಯಲ್ಲಿನ ಸಹಜ - ಹುಚ್ಚು ಹಟ
ಹೊಕ್ಕುಳ ಗುಣಿಯಲ್ಲಿಟ್ಟಿದ್ದೀನಿ ಕ್ಷಣವನ್ನ
ಅವಲಂಬನವಲ್ಲಾ ನಾನೂ ನೀನು



ಶಬ್ದ ಕೇಳ್ತೀಯ? ಶಬ್ದ ಆಡ್ತೀಯ?

ಮಾತು ಬರೋದಿಲ್ಲ, ಮಾತು ಕೇಳೋದಿಲ್ಲ

.
.
ಮ್
.
.
ಉಹೂ ಆಗುತ್ತಿಲ್ಲ.
ನನ್ನಲ್ಲಿ ಶಬ್ದಗಳು ಹುಟ್ಟತ್ತಿಲ್ಲ.


2 ಕಾಮೆಂಟ್‌ಗಳು:

  1. ನಿಮ್ಮ ಬರವಣಿಗೆಯನ್ನು ಆಸಕ್ತಿಯಿಂದ, ಅವಕಾಶ ಸಿಕ್ಕಂತೇ, ಓದುತ್ತಿದ್ದೇನೆ. ನಿಮ್ಮೊಳಗೆ ಅಪಾರ ಸಂಗ್ರಹವಿರುವಂತೆ ತೋರುತ್ತೆ; ಬರೆಯುತ್ತಲಿರಿ; ನಿಮಗೆ ಒಳಿತಾಗಲಿ.

    ಪ್ರತ್ಯುತ್ತರಅಳಿಸಿ
  2. ಭಾಮತಿ ಯವರಿಗೆ ಧನ್ಯವಾದಗಳು..... ಕಂಡೀತವಾಗಿಯೂ ಬರೆಯುತ್ತಿರುತ್ತೇನೆ...... ಅದೊಂದೆ ಸದ್ಯ ನಾನು ಕಾಣಬೊಹುದಾದ ಮಾರ್ಗ.....

    ಪ್ರತ್ಯುತ್ತರಅಳಿಸಿ