ವ್ಯವಸ್ಥಿತ ಚಿಂತನಾ ಕ್ರಮದಲ್ಲಿ ನಾವು ಚಿಂತಿಸಬೇಕಾದಾಗ, ವರ್ಥಮಾನವು ಭೂತ ಹಾಗು ಭವಿಷ್ಯತ್ತಿನೊಂದಿಗೆ ಸಮೀಕರಿಸಿಕೊಂಡೇ ಇರುತ್ತದೆ. ಹೀಗೆಂದು ಭಾರತೀಯ ಚಿಂತನಾ ಕ್ರಮದ ಬದಲಾವಣೆಯ ಪ್ರಮುಖ ಕಾಲಘಟ್ಟಗಳನ್ನೂ, ಆ ಕಾಲಘಟ್ಟದ ವ್ಯಕ್ತಿಗಳನ್ನೂ ಅಭ್ಯಯಿಸುತ್ತಿದ್ದೆ. ಹೀಗೆ ನನಗೆ ಪ್ರಮುಖರೆಂದೆನಿಸಿದವರು ರಾಜ ರಾಮ್ ಮೋಹನ್ ರಾಯ್ ರವರು. ಯಾವುದನ್ನ ನಾವು ಆಧುನಿಕ ಭಾರತ ಎಂದು ಕರೆಯುತ್ತೇವೆಯೋ ಅದರ ಆರಂಭವನ್ನ ೧೯ ನೇ ಶತಮಾನದ ಆದಿಗೆ ಸೇರಿಸಬೊಹುದು, ಹಾಗು ಆ ಕಾಲದ ಪ್ರಮುಖ ವ್ಯಕ್ತಿಯನ್ನಾಗಿ ರಾಮಮೋಹನರಾಯರನ್ನು ಗುರುತಿಸುತ್ತ ಆದುನಿಕ ಭಾರತದ ಪಿತಾಮಹ ಎಂದು ಇವರನ್ನ ಕರೆದಿದ್ದಾರೆ.
ರಾಮಚಂದ್ರ ಗುಹ ಬರೆದಿರುವ makers of modern india ಎಂಬ ಪುಸ್ತಕದಲ್ಲಿ ನೀಡಿದ್ದ, ರಾಮಮೋಹನ ರಾಯರು ಬ್ರಿಟೀಶರಿಗೆ ಬರೆದಿದ್ದ ಪತ್ರ ನನ್ನನ್ನು ಆಕರ್ಷಿಸಿತು. ೧೮೨೩ರಲ್ಲಿ ಬರೆದಿದ್ದ ಪತ್ರವದು. ಬ್ರಿಟೀಶ್ ಸರ್ಕಾರ ಭಾರತೀಯರ ವಿದ್ಯಾಬ್ಯಾಸಕ್ಕಾಗಿ ಸ್ವಲ್ಪ ಹಣವನ್ನು ಮೀಸಲಿಟ್ಟಿತ್ತು, ಆಗ ಬ್ರಿಟೀಶ್ ಸರ್ಕಾರ ಒಂದು ಸಂಸ್ಕೃತ ಶಾಲೆಯನ್ನು ಆರಂಬಿಸುವ ಉದ್ದೇಶ ಹೊಂದಿದ್ದರು. ಅದನ್ನು ವಿರೋದಿಸಿ ನಮಗೆ ಸಂಸ್ಕೃತ ಶಾಲೆಗಿಂತ ಆಧುನಿಕ english ಶಿಕ್ಷಣವನ್ನ ಒತ್ತಿಹೇಳಿದ್ದರು.
"We were filled with sanguine hopes that this sum would be laid out in employing europian gentlemen of talents and education to instruct the natives of india in mathematics, Natural philosophy, chemistry, anatomy and other usefull Sciences"
"The Sanskrit System of Education Would be Best Calculated to keep this country in darkness"
ಹೀಗೆ ವಾದಿಸಿ ನಮಗೆ ಆದುನಿಕ ಶಿಕ್ಷಣವನ್ನ ನೀಡಲು ಪ್ರಯತ್ನಿಸಿದರು.
ನಂತರ ನಮ್ಮ ಶಿಕ್ಷಣ ಪದ್ದತಿ ಹಲವು ಪ್ರಮುಖ ಘಟ್ಟಗಳನ್ನೂ, ಶಿಕ್ಷಣ ಪದ್ದತಿಗಳನ್ನೂ, ಹೊತ್ತು ಈಗಲೂ ಸಾಗುತ್ತಿದೆ. ಸದ್ಯ ನಾನು ಶಿಕ್ಷಣ ಕ್ಷೇತ್ರವನ್ನ ನನ್ನ ಕಾರ್ಯ ಕ್ಷೇತ್ರವನ್ನಾಗಿಸಿಕೊಂಡಿರುವುದರಿಂದ, ನನಗೆ ಹಲವು ಪ್ರಶ್ನೆಗಳು ಕಾಡುತ್ತಿವೆ.
ಎಲ್ಲರಲ್ಲೂ, ಸಾಮಾನ್ಯರಿರಬೊಹುದು, ಚಿಂತಕರಿರಬೊಹುದು, ಸಾಹಿತಿಗಳಿರಬೊಹುದು, ಶಿಕ್ಷಣ ಕ್ಷೇತ್ರದಲ್ಲಿರುವವರಿರಬೊಹುದು, ವಿದ್ಯಾರ್ಥಿಗಳಿರಬೊಹುದು, ಅತಿ ಮುಖ್ಯವಾಗಿ ಜವಾಬ್ದಾರಿಯುತ ನಾಗರೀಕರಿರಬೊಹುದು, ಎಲ್ಲರಿಗೂ ನನ್ನದೊಂದು ಪ್ರಾಮಾಣಿಕ ವಿನಂತಿ, ನನಗೆ ಈ ಸಂದರ್ಭದಲ್ಲಿ ಕಾಡಿದಂತಹ ಕೆಲವು ಪ್ರಶ್ನೆಗಳನ್ನು ತಮ್ಮ ಮುಂದಿಡುತ್ತಿದ್ದೇನೆ. ಅದಕ್ಕೆ ಉತ್ತರಗಳನ್ನ ತಿಳಿಸಬೇಕಾದವರು ತಾವುಗಳು. ತಾವೂ ಪ್ರಶ್ನೆಯನ್ನ ಸೇರಿಸಬೊಹುದು. ಈ ರೀತಿಯ ಆರೋಗ್ಯಕರವಾದ ಸಂವಾದದಿಂದ ಒಂದು ಉತ್ತಮ ಸಮಾಜವನ್ನ, ಶಿಕ್ಷಣವನ್ನ ನೀಡಬಹುದು ಎಂಬ ಚಿಕ್ಕ ಕಳಕಳಿ. ತಾವೆಲ್ಲರೂ ಸ್ಪಂದಿಸುತ್ತೀರೆಂದು ಆಶಿಸುತ್ತೇನೆ. ಪ್ರತಿಯೊಬ್ಬರ ವೈಯುಕ್ತಿಕ ಚಿಂತನೆಗಳೂ ಇಲ್ಲಿ ಮುಖ್ಯ. ತಮಗೆ ಗೊತ್ತಿದ್ದಂತಹ ಅಮೂಲ್ಯ ಮಾಹಿತಿಗಳಿದ್ದಲ್ಲಿ ಅದನ್ನೂ ಸೇರಿಸಿ. ಒಟ್ಟಿನಲ್ಲಿ ನಮ್ಮ ಶಿಕ್ಷಣವನ್ನ ಉತ್ತಮಪಡಿಸಿದರೆ ಅಷ್ಟೇ ಸಾಕು.
.
೧. ಯಾವುದನ್ನು ನೀವು ಶಿಕ್ಷಣ ಎನ್ನುತ್ತೀರಿ? ಅಂತಹ ಶಿಕ್ಷಣವನ್ನ ನೀಡುವ ಬಗೆ ಹೇಗೆ? ಹಾಗು ಅಂತಹ ಶಿಕ್ಷಣ ಇಂದಿಗೆ ಪ್ರಸ್ಥುತವೆ.?
೨. ಇಂದಿನ ಹಲವು ಸಮಸ್ಯೆಗಳಿಗೆ ಶಿಕ್ಷಣವನ್ನ ಪರಿಹಾರವನ್ನಾಗಿಸಬಯಸಿದರೆ, ಆ ರೀತಿಯ ಶಿಕ್ಷಣವನ್ನ ನೀಡುವ ಬಗೆ ಎಂತಹುದು?
೩. ಇಂದಿನ ಶಿಕ್ಷಣ, ಬದುಕಿನ ಬಗೆಗಿನ ಒಳನೋಟವನ್ನೂ, ಜೀವನ ಪ್ರೀತಿಯನ್ನೂ ನೀಡುತ್ತಿದೆಯೆ? ಇಲ್ಲವಾದರೆ ಬದುಕನ್ನ ಪ್ರೀತಿಸುವಂತಹ ಶಿಕ್ಷಣವನ್ನ ನೀಡುವ ಬಗೆ ಹೇಗೆ?
೪. ೧೭೮ ವರ್ಷಗಳ ಹಿಂದೆ ರಾಮಮೋಹನ ರಾಯರು ಯಾವ ಚಿಂತನಾ ಕ್ರಮಗಳಿಂದ ಮನುಷ್ಯ ಜೀವಿತ ಪ್ರಜ್ಞೆ ವಿಸ್ತಾರವನ್ನು ಹೊಂದಿ ಜೀವನ ಪ್ರೀತಿಯನ್ನ ಗಳಿಸಬೇಕೆಂಬ ಆಶಯದಿಂದ ವಿದ್ಯಾಬ್ಯಾಸ ಪದ್ದತಿಯನ್ನ ಬದಲಿಸಿದರೋ, ಆ ಚಿಂತನಾ ಕ್ರಮಗಳು ನಮಗೆ ದಕ್ಕಿದೆಯೆ?
೫.ಜೀವ ವಿರೋದವನ್ನ (ಒಬ್ಬ ಮನುಷ್ಯನನ್ನು ಹೀನವಾಗಿ ಕಾಣುವುದು) ಕಾನೂನಿನ ಮೂಲಕ ವಿರೊದಿಸುತ್ತಿದ್ದೇವೆಯೆ ವಿನಃ ಶಿಕ್ಷಣದಿಂದಲ್ಲ, ಹಾಗಾದರೆ ತಪ್ಪಿರುವುದೆಲ್ಲಿ?
೬. ಶಿಕ್ಷಣದ ಬೆಗೆಗಿನ ತಮ್ಮ ತಾತ್ವಿಕ ಚಿಂತನೆಯೇನು?
೭. ಶಿಕ್ಷಣದ ಬಗ್ಗೆ ಚಿಂತಿಸಿದಾಗ ತಮ್ಮ ಅನುಭವದಿಂದ ಮೂಡುವ ಪ್ರಶ್ನೆಗಳಾವುವು.?
ಮನುಷ್ಯ ಮನುಷ್ಯನನ್ನ ಪ್ರೀತಿಸುವಂತಹ ಜೀವನ ಪ್ರೀತಿಯುಳ್ಳ ಶಿಕ್ಷಣವನ್ನ ರೂಪಿಸಬೇಕೆಂಬುದು, ಅಂತಹ ಶಿಕ್ಷಣವನ್ನ ನೀಡಬೇಕು ಹಾಗು ತಿಳಿಸಬೇಕೆಂಬುದು ನನ್ನ ಆಶಯ. ಅದಕ್ಕೆ ತಮ್ಮೆಲ್ಲರ ಸಹಕಾರದ ಅವಶ್ಯಕತೆಯಿದೆ. ಇವಕ್ಕೆ ಸ್ಪಂದಿಸುತ್ತೀರೆಂದು ಆಶಿಸುತ್ತೇನೆ.
Vrashabaraj
ಪ್ರತ್ಯುತ್ತರಅಳಿಸಿPhysics Professor
(ವೃಷಭರಾಜ್ ರವರು ಈ ಅಭಿಪ್ರಾಯಗಳನ್ನ ಕಳುಹಿಸಿರುತ್ತಾರೆ. ಅವರಿಗೆ ಧನ್ಯವಾದಗಳು. ಅರವಿಂದ)
ಅರವಿಂದರ "ಶಿಕ್ಷಣ- ಒಂದು ಸಂವಾದ" ಉತ್ತಮ ಪ್ರಯತ್ನ. ನಮ್ಮ ಚಿಂತನೆಗೊಂದು ಸವಾಲು. ಎಲ್ಲರ ಬಗ್ಗೆ- ಎಲ್ಲದರ ಬಗ್ಗೆ ಪ್ರೀತಿ ಕಾಳಜಿ ಹೊಂದಿರುವ ಅರವಿಂದ ಯಾವತ್ತೂ ಸಮಾಜ ಮುಖಿ. ಪ್ರತಿಯೊಬ್ಬರ ಮನಸ್ಸಿನಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಅಕ್ಷರ ರೂಪಕೊಟ್ಟು ನೀವೇನು ಮಾಡುತ್ತೀರಿ? ನಾವೇನು ಮಾಡಬೊಹುದು? ಎಂಬ ಒತ್ತಾಯದ ಕರೆಗೆ ಸ್ಪಂದಿಸಬೇಕೆಂಬ ಸಹಜ ಬಯಕೆಯಿಂದ ನನ್ನ ಅಭಿಪ್ರಾಯವನ್ನ ವ್ಯಕ್ತಪಡಿಸುತ್ತಿದ್ದೇನೆ.
೧. "ಹೃದಯದ ಶಿಕ್ಷಣವೇ ಶಿಕ್ಷಣದ ಹೃದಯ" ಎಂಬಂತೆ ಹೃದಯವಂತಿಕೆಯನ್ನ ಹುಟ್ಟುಹಾಕುವ ಶಿಕ್ಷಣವೇ ನಿಜವಾದ ಶಿಕ್ಷಣ.
ಕಣ್ಣು - ಹೃದಯ - ಮನಸ್ಸು ಇವುಗಳನ್ನು ತೆರೆದಿಟ್ಟು ಪ್ರತಿಯೊಂದನ್ನೂ ವೀಕ್ಷಿಸುವ, ಪರೀಕ್ಷಿಸುವ, ಪ್ರಶ್ನಿಸುವ ರೀತಿ ಮತ್ತು ಹಕ್ಕನ್ನು ಯುವಜನತೆಗೆ ನೀಡಬೇಕು(ಕಲಿಸಬೇಕು)
ಇಂತಹ ಶಿಕ್ಷಣ ಇಂದಿಗೆ ಪ್ರಸ್ಥುತ ಮಾತ್ರವಲ್ಲ ಇಂದಿನ ಅಗತ್ಯ ಕೂಡ
೨. ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡುವ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಿದರೆ ನಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೊಹುದು.
೩. ಇಂದಿನ ಶಿಕ್ಷಣ ಪದ್ದತಿ ವ್ಯಕ್ತಿಯನ್ನು ಅಂತರ್ಮುಖಿಯನ್ನಾಗಿಸಲು ಅವಕಾಶವನ್ನೇ ನೀಡುವದಿಲ್ಲ. ಬಾಹ್ಯಾಡಂಬರವನ್ನೇ ಜೀವನ ಎಂದು ಯುವಕರು ತಿಳಿದುಕೊಂಡಿದ್ದಾರೆ. ಜೀವನ ಪ್ರೀತಿಯನ್ನು ಅತೀ ಚಿಕ್ಕ ಪ್ರಾಯದಲ್ಲಿ ಮನೆಯಿಂದಲೇ ಆರಂಬಿಸಬೇಕು. "Life is an echo" ಪ್ರೀತಿಯಿಂದ ಪ್ರೀತಿ, ಗೌರವದಿಂದ ಗೌರವ, ದ್ವೇಷದಿಂದ ದ್ವೇಷ, ಹಿಂಸೆಯಿಂದ- ಹಿಂಸೆ ಹುಟ್ಟುತ್ತದೆ ಎಂಬುದನ್ನು ಮನದಟ್ಟು ಮಾಡುವ ಜವಾಬ್ದಾರಿ ಹೆತ್ತವರಿಗೆ ಮತ್ತು ಅದ್ಯಾಪಕರಿಗಿದೆ.
೪. No idea
೫. ಸ್ವಾರ್ಥ. ಈ ಕುಟುಂಬ, ಸಮಾಜ, ಸಂಸ್ಥೆ, ಸರ್ಕಾರ ಎಲ್ಲವೂ ನನಗಾಗಿ. ಕೇವಲ ನನಗಾಗಿ ಎಂಬೋ ಮನೋಭಾವ. ನಾನು ಸರಿ ಎಂದು ಯೋಚಿಸುವುದು ತಪ್ಪಲ್ಲ, ಆದರೆ ನಾನು ಮಾತ್ರ ಸರಿ ಎಂಬ ದೋರಣೆ ಇಂದಿನ ಪ್ರಮಾದಕ್ಕೆ ಕಾರಣ. ಪ್ರತಿಯೊಬ್ಬರೂ ತಮ್ಮ ಹಕ್ಕುಗಳ ಬಗ್ಗೆ ಚಿಂತಿಸುತ್ತಾರೆಯೆ ಹೊರತು ಕರ್ತವ್ಯದ ಬಗ್ಗೆ ಯೋಚಿಸುವುದಿಲ್ಲ. ನಮ್ಮ ಶಿಕ್ಷಣ ಪದ್ದತಿ, ವಿಶಾಲ ಮನೋಭಾವ ಬೆಳೆಸುವುದರಲ್ಲಿ ವಿಫಲವಾಗಿದೆ.
೬. ಇಂದಿನ ಶಿಕ್ಷಣ ಪದ್ದತಿ ಮಾಹಿತಿ ಸಂಗ್ರಹಕ್ಕೆ ಅತೀ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುತ್ತಿದೆ. ಬದುಕಿನ ಕಲೆಯನ್ನ ನೀಡುವಲ್ಲಿ ಸೋಲುತ್ತಿದೆ. ಹೀಗಿದ್ದರೂ ಅದ್ಯಾಪಕರುಗಳು ಶಿಕ್ಷಣ ಕ್ಷೇತ್ರದ ಕೇಂದ್ರ ಬಿಂದು. They have to deliver the goods. ಅದ್ಯಾಪಕರುಗಳಿಗೆ ಸಾಕಷ್ಟು ಸ್ವಾತಂತ್ರ್ಯ ಈ ಪದ್ದತಿಯಲ್ಲಿದೆ. ಅದನ್ನ ಉಪಯೋಗಿಸಿಕೊಂಡು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿಯನ್ನ ಅರಿತಾಗ He can make a person, otherwise he will break a person.
೭. -ಬೇರೆಲ್ಲಿಯೂ ಸಲ್ಲದವರು ಇಂದು ನಮ್ಮ ದೇಶದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಾಗುತ್ತಿದ್ದಾರೆ.(ಕೆಲವೊಂದು
ಅಪವಾದಗಳಿರಬೊಹುದು). ಇದು ತಪ್ಪಬೇಕು.
-ಶಿಕ್ಷಕರಾಗಿ ಬರುವವರಿಗೆ ಕೆಲವೊಂದು ಪ್ರಾಥಮಿಕ ಕೌಶಲ್ಯಗಳ ಬಗ್ಗೆ ತರಬೇತಿ ನೀಡಬೇಕು
-ಶಿಕ್ಷಕರನ್ನ ನೇಮಿಸುವಾಗ ಮೀಸಲಾತಿ ನಿಯಮ ಅನುಸರಿಸಬಾರದು. ಅರ್ಹತೆ ಮಾತ್ರ ಅಳತೆಗೋಲಾಗಬೇಕು.
-ಶಿಕ್ಷಕ ವಿದ್ಯಾರ್ಥಿ ratio 1:40 ಗಿಂತ ಮೀರಬಾರದು.
-ಆದ್ಯಾತ್ಮವನ್ನು ಶಿಕ್ಷಣದಿಂದ ಬೇರ್ಪಡಿಸಿರುವುದು ನಮ್ಮ ದೇಶದ ದುರಂತ