...

ಆ ಕಾಲದಲ್ಲಿ ಆಕಾಶವನ್ನು
ನಂತರದಲ್ಲಿ ಭೂಮಿಯನ್ನು
ಬೆಂಬಲಿಸಿದೆ
ಆಗ ಡ್ರಾಗನ್ ಆಗಿದ್ದೆ
ನಂತರ ಕಾಳ ಸರ್ಪ
ಮನ ಬಂದಂತೆ ತಿರುಗಾಡಿದೆ
ನನ್ನಿಚ್ಛೆಯಂತೆ  ಕೊಡುತ್ತೇನೆ
ನನ್ನಿಚ್ಛೆಯಂತೆ ತೆಗೆದುಕೊಳ್ಳುತ್ತೇನೆ
ಹಲ್ಲುಗಳಿಂದ ಚಿರತೆಯನ್ನು ಕಡಿಯುತ್ತೇನೆ
ನನ್ನ ಚೈತನ್ಯ ಪರ್ವತಗಳನ್ನು  ಪುಡಿಯಾಗಿಸುತ್ತೆ

ನನ್ನ ದೇಹದ ಯಾವ ಮೂಳೆಯೂ ಪವಿತ್ರವಲ್ಲ
ಇದು ಕೊಳೆಯುತ್ತಿರುವ ಮೂಳೆಗಳ ಬೂದಿಯ ರಾಶಿ
ಆಳಕ್ಕೆ ತೋಡಿ ಹೂತಿಡಿ
ಇದರದೊಂದು ಧೂಳಿನ ಕಣವೂ
ಕಲೆಯಾಗಿಸಬಾರದು
ಈ ಹಸಿರ ಪರ್ವತಗಳನ್ನು


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ