...

ಯಾರು ಬರುತ್ತಾನೋ ಅವನಿಗೆ
ಅವನ ಬರುವಿಕೆ ಮಾತ್ರಾ ಗೊತ್ತು
ಯಾರು ಹೋಗುತ್ತಾನೋ ಅವನಿಗೆ
ಅವನ ಹೋಗುವಿಕೆ ಮಾತ್ರಾ ಗೊತ್ತು
ಈ ಕಂದರದಿಂದ ಉಳಿಯಬೇಕಾದರೆ
ಕಡಿದಾದ ಭಾಗಕ್ಕೇಕೆ ಅಂಟಿಕೊಳ್ಳಬೇಕು
ಮೋಡಗಳು ಕೆಳಗೆ ತೇಲುತ್ತಿವೆ
ಎಂದಿಗೂ ತಿಳಿಯದು ಗಾಳಿ ಇವುಗಳನ್ನು
ಎತ್ತ ಕೊಂಡೊಯ್ಯುತ್ತದೆಂದು.


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

2 ಕಾಮೆಂಟ್‌ಗಳು:

  1. ಮೋಡಗಳಿಗೆ ಗಾಳಿ ಎತ್ತ ಕೊಂಡೊಯ್ಯುತ್ತದೆ ಗೊತ್ತಿಲ್ಲ. ಆದರೆ ಅವು ತಮ್ಮ ಭೂಮಿಗೆ ಮಳೆಸುರಿಸಿ ತಂಪಾಗಿಸುವ ಗುಣ ಉಳಿಸಿಕೊಂಡಿವೆ. ಅದೇ ಆಗಬೇಕು.

    ಪ್ರತ್ಯುತ್ತರಅಳಿಸಿ