...

"ತೀವ್ರವಾಗಿ ಈ ಬದುಕ ಆಸ್ವಾದಿಸಿದ್ದೇನೆ "
ಪಾಳು ಬಿದ್ದ ಮನೆಗೋಗುವ
ಮುರಿದ ಸೇತುವೆ ಕೆಳಗೆ
ಇದ್ದಾಗ
ಹೋದ ತೋಸೈನ
ಪತ್ರದಲ್ಲಿದ್ದ ಸಾಲುಗಳಿವು

ಭಿಕ್ಷು ಅಲ್ಲ ತಿರುಕ
ತಿರುಪೆ ಎತ್ತುವವ
ಸದಾ ಹರಕು ಬಟ್ಟೆ
ನೆಲೆ ಬೇಡದೆ ಅಲೆದದ್ದು
ಕಂಡ ಕಂಡಲ್ಲೆಲ್ಲಾ

ಒಮ್ಮೆ ಹೀಗಾಯಿತು
ತಿರುಕನೊಬ್ಬ ಸತ್ತಿದ್ದ
ಉಳಿದಿತ್ತು ಅವನೆತ್ತಿದ್ದ ತಿರುಪೆ ಅನ್ನ
ದೇಹವನ್ನು ಸುಟ್ಟು ಬಂದವ
ತಿನ್ನುತ್ತಾ ಕೂತ ಆ ಅನ್ನವನ್ನು
ಆಹಾ ರುಚಿಯೆ ಎಂದು


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

3 ಕಾಮೆಂಟ್‌ಗಳು: