ನನ್ನಾಕೆ ಮರಿ ಆನೆ ಪಳಗಿಸೋ
ಮಾವುತಳ ಕೆಲಸಕ್ಕೇ ಲಾಯಕ್ಕು
ಎಂದೆನಿಸಿ
ಮರಿ ಆನೆಯ
ಅಕ್ಷರಾಭ್ಯಾಸಕ್ಕೆ ಬಳಪ ಹಲಗೆ
ತಯಾರಿಸೋಕ್ಕೆ
ಇಡೀ ಕಾಡು ಇಡೀ ಭೂಮಿ ಹುಡುಕಿ
ಹೊರಟು ದಾರಿ ಬದೀಲಿ
ನನ್ನನೆಳೆದೊಯ್ಯುವಾಗ ಸೆಳೆತದ
ಸದ್ದು ಕೇಳಿ ನೀರು ಹೋ ಎಂದದ್ದೇ
ನೀರೊಳಗಿನ ಮಿಣುಕುಹುಳ ಬಾಯ್ತೆರೆದು
ನನ್ನನೊಳಹಾಕಿಕೊಂಡಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ