ಅದೆಷ್ಟು ಬಾರಿ ಹರಟೆಯೊಡೆದಿಲ್ಲ
ನಾನೂ ನೀವೂ – ಗಂಟೆಗಟ್ಟಲೆ
ಸುತ್ತೆಲ್ಲಾ ಕಾಣ್ವ ಆ ಭಾರೀ ಜನರೊಟ್ಟಿಗೆಯೂ
ಗುರುತಿಸಿದ್ದೀರಿ ನನ್ನನ್ನು
ಬಂದಿದ್ದೀರಿ ನನ್ನ ಬಳಿಗೆ
ಸನ್ಮಾನ ಆ ದೊಡ್ಡ ಪೀಠ
ಎಲ್ಲವನ್ನೂ ಬಿಟ್ಟು
ಭಗವಂತನೇ ಭಕ್ತನೆಡೆಗೆ
ಆ ಭಾಗವತದಲ್ಲೇ ನುಡಿದಂತೆ
ಬಂದಿದ್ದೀರಿ – ನಾ ಭಕ್ತನಲ್ಲ ಮತ್ತೆ
ಈ ಬಾರಿ ಇಬ್ಬರೂ ಹರಟೆಯೊಡೆದೆವು
ನೀವೂ ಮಾತನಾಡಲಿಲ್ಲ ನಾನೂ ಕೇಳಲಿಲ್ಲ
ಅಲ್ಲಿ ರಾಮಕೃಷ್ಣರ ಬಗೆಗಿನದು ನಿಮ್ಮ ಮಾತು
ಆ ಮಹಾಕಾಳಿ ಅಲ್ಲಿ ಮಾತನಾಡುತ್ತಿದ್ದದ್ದು
ನಾ ಕೇಳುತ್ತಿದ್ದೆ – ಹಾಗೇ ಸುಮ್ಮನೆ
ಬೀಳ್ಕೊಡುಗೆ – ಅದುವೇ ನೋಟ
ಅದೇ ನೋಟ
ನೀವೂ, ಆ ಕಣ್ಣು
ಹರಸಿದ್ದು ಮಾತ್ರ ತಿಳಿದಿತ್ತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ