ನಿಲ್ಲಿಸಿದ ಸೈಕಲ್ಲು ಅಲ್ಲಿ ಹಾಗೇ ಇದೆ
ಭುಜದ ಮೇಲೆ ಹೊತ್ತೊಯ್ವಾಗ
ತೊಟ್ಟಿಕ್ಕುತ್ತಿದೆ ಮಣ್ಣ ಕೆಸರು
“ತಲೆ ಮಾತ್ರ ಕಾಣುವಂತೆ ತೇಲುತ್ತಿತ್ತಂತೆ”
ಸಣ್ಣ ಕೆರೆ, ಮಗು ಸಣ್ಣವ
ಅದೇ ನೀರು ಬರುತ್ತೆ ನಾಳೆ
ಶುದ್ಧೀಕರಣಗೊಂಡು
ಅದರೊಳಗೆ ಅವನ ಕಡೆಯ ಉಸಿರಿರುತ್ತಾ
ಅದೇ ನೀರು ಕುಡಿದು
ಮೈ ಕೈಗೆಲ್ಲ ಚೆಲ್ಲಿ
ಹೊರಟು ಬಿಡುತ್ತೇವೆ
ಸಂಸ್ಥೆಗಳೇ ಹಾಗಲ್ಲವೇ
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿ