...

 

ನಿನ್ನ ಪಾದಗಳಿಗಿದೋ ಶರಣು 

ತಲೆ ಬಗ್ಗಿಸಿದ್ದೇ - ಬಾಬಾ 

ತಲೆಯ ಮೇಲೆ ಕಾಲನಿಟ್ಟದ್ದೊಂದೇ ನೆನಪು 

ಇದೋ ಇಲ್ಲಿದ್ದೀನಿ 

ಶವಗಳ ರಾಶಿಯಲ್ಲೆಲ್ಲೋ ನನ್ನದೂ  ಉಂಟು 

ಹಚ್ಚ ಹಸಿರಿನ ಸೀರೆಯನ್ನದು 

ಅವನ ಕುಡಿತಕ್ಕೆ ಬಡಿತಕ್ಕೆ 

ಮಿಗಿಲಿ ಉಳಿದಿದ್ದ ಒಂದೇ ಒಂದು ಸೀರೆ 

ಬಣ್ಣ ಮಾಸಿದ್ದೂ ಗುರುತು ಸಿಕ್ಕುತ್ತಿಲ್ಲ 

ಎಲ್ಲಾ ಶವಗಳೂ  ಎಲ್ಲಾ ಸೀರೆಗಳೂ 

ಒಂದೇ ಬಣ್ಣದ್ದಾಗಿದೆ 

ಯಾರಾದರೂ ಮೊಬೈಲಿನಲ್ಲಿಡಿದಾಗ 

ಏನಾದರೂ ಕಂಡೀತ 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ