ಅನುತ್ತರ

ಸ್ಪುಟವಾದ ಉಚ್ಛಾರ ಅಹಂಕಾರ

ಪುಟ್ಟ ಕೋತಿಯ ಮುಖ

ವಯಸ್ಸಾದ ಮನುಷ್ಯನಂತೆ ಕಾಣುತ್ತೆ

ವ್ಯಂಜನವೂ ಅಕ್ಷರ ಹಾಗು ಸಹಜ

ಕೃತಕ ಗರ್ಭಧಾರಣೆ ರಶೀದಿ

ಹಿಂದಿನ ಜಾಹಿರಾತಿನ ಚಿತ್ರಕ್ಕೆ

ಸ್ಮಾರಕದ ಮಹತ್ವ

ಸಣ್ಣ ಕಂಪನಕ್ಕೂ ಬೆಚ್ಚಿ ಬೀಳುವಾಗ

ಎಲ್ಲವೂ ಸುಳ್ಳೆಂದೆನಿಸುತ್ತೆ

ರಭಸಕ್ಕೆ ಹೆಚ್ಚೆಂದರೆ ಭೋರ್ಗರೆವ ಗುಣ

ಇದಕ್ಕೆ ಹಾಗಲ್ಲ ನಿಧಾನವಾಗಿ ಆಗಬೇಕು

ಉತ್ತರದ ಹಾಸು ಹೊದ್ದು ಮಲಗಿದ ಕೂಸಿಗೆ

ಮೊಲೆ ಹಾಲು ಕೊಡುವವನ ಹಿಂದೆ

ಅವಳ ನಡಿಗೆಯನ್ನಲ?

1 ಕಾಮೆಂಟ್‌: