...................

ನನಗೆ ತಿಳಿಯೋಲ್ಲ
ಯಾಕೆ ಜನಗಳು ದೆವ್ವಗಳನ್ನ ಕಂಡರೆ ಹೆದರುತ್ತಾರೆ ಅಂತ,
ದೆವ್ವಗಳು ಅಂದರೆ ಅತೃಪ್ತ ಆತ್ಮಗಳಂತೆ

ನಾನು ಒಂದು ಅತೃಪ್ತ ಆತ್ಮಕ್ಕೆ
ಕಾವಲುಗಾರನಾಗಿ ನಿಯಮಿಸಲ್ಪಟ್ಟಿದ್ದೇನೆ
ಒಂಟಿ ಕಾವಲುಗಾರನಾದುದರಿಂದ
ಬೇಸರ ಕಾಡದಿರಲೆಂದು/ಭಯಪಡಬಾರದೆಂದು
ಈ ಅತೃಪ್ತ್ ಆತ್ಮವು ತೃಪ್ತವಾಗುವ ಬಗೆಯನ್ನ ತಿಳಿಯಲಿಕ್ಕೆ
ನನ್ನ ಜೀವನವನ್ನ ಮೀಸಲಿರಿಸಿದ್ದೇನೆ.

8 ಕಾಮೆಂಟ್‌ಗಳು:

  1. ಅತೃಪ್ತ ಆತ್ಮ ನಿಜವಾಗಲು ತೃಪ್ತ ಆಗಲು ಸಾಧ್ಯವೇ?

    ಪ್ರತ್ಯುತ್ತರಅಳಿಸಿ
  2. ಗೊತ್ತಿಲ್ಲ,
    ಅದನ್ನ ಅರಿಯುವುದರಲ್ಲೇ ನಾನು ನಿರತನಾಗಿದ್ದೇನೆ.
    ದೇವರು-ತೃಪ್ತ ಆತ್ಮದ ಕಾವಲುಗಾರ- ಸದಾ ಹಸನ್ಮುಖಿ
    ನನ್ನ ಜೀವಂತಿಕೆಯೆ ಆತ್ಮದ ಅತೃಪ್ತಿ/ತೃಪ್ತಿಯ ಪ್ರಶ್ನೆ/ಉತ್ತರದಲ್ಲೇ....

    ಪ್ರತ್ಯುತ್ತರಅಳಿಸಿ
  3. ಆತ್ಮ ಅತೃಪ್ತಿ ಪಡಲು ಕಾರಣವಾದರು ಏನು?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು

    1. ಒಮ್ಮೆ ತೃಪ್ತಗೊಂಡು ಗಾಢ ನಿದ್ರೆಯಿಂದ ಎಚ್ಚರಾದಾಗ
      ತನ್ನ ಎಚ್ಚರಿಕೆಯ ಪ್ರಜ್ಞೆ ಮೂಡಲಿಲ್ಲವಂತೆ
      ನಿದ್ರಿಸಿದಾಗ ಕಂಡ ಕನಸು ನಿಜವೋ
      ಎಚ್ಚರಾದಾಗಿನ ಜಗವು ನಿಜವೋ
      ಎರೆಡರ ನಡುವಿನ ತಾನು ನಿಜವೋ
      ನಿಜವು ನಿಜವೋ
      ಹೀಗೆ ಅತೃಪ್ತಗೊಂಡಿದೆ

      ಭಾಷೆಯ ತಾಕತ್ತಿನ ಮೇಲೆ ಭಯಗೊಂಡಿದೆ
      ತರ್ಕ ಪೂರ್ಣದಲ್ಲಿ ಅಸ್ತಿರತೆ ಅಂತನ್ನುತ್ತೆ
      ಹೀಗಾಗಿ
      ಅಸ್ತಿತ್ವ ಅತೃಪ್ತಿಯಲ್ಲಿ ಎಂದು ತೃಪ್ತಗೊಂಡಿದೆ

      ಅಳಿಸಿ
  4. ಅತ್ರುಪ್ತತೆ ಇಂದ ತ್ರುಪ್ತತೆಯ ಕಡೆಗೆ ಹೋಗಬಹುದು ಎಂಬ ಭಾವವು ಅತ್ರುಪ್ತತೆ ಮೂಡಿಸುವಲ್ಲಿ ಮುಖ್ಯ ಪಾತ್ರವಹಿಸಿರುವಂತೆ ಕಾಣಿಸುತ್ತದೆ....!

    ಪ್ರತ್ಯುತ್ತರಅಳಿಸಿ
  5. ಅತೃಪ್ತಿ - ಗುಣ, ಅತೃಪ್ತ - ವ್ಯಕ್ತಿ. ಆತ್ಮ - ಸಾಕಾರನೋ ನಿರಾಕಾರನೋ ಅಂತೂ ಒಂದು ವ್ಯಕ್ತಿ. ಈ ಕಾವಲುಗಾರನಿಗೇನು ಡಬ್ಬಲ್ ಡ್ಯೂಟೀನಾ? ಆತ್ಮಕ್ಕೆ ದೇಹವೇ ಮಿತಿ, ಗುಣಕ್ಕೆ ಜೀವಾಜೀವಗಳ ಮಿತಿಯಿಲ್ಲ. ಮತ್ತವೆಲ್ಲಾ ಏನಿದ್ದರೂ ಇಲ್ಲದಿದ್ದರೂ ಕಾವಲುಗಾರ ಕೇವಲ ಕಾಲಕ್ಕೆ ಸಾಕ್ಷಿಯಾಗುತ್ತ ಯಥಾಸ್ಥಿತಿವಾದಿಯಾಗಿರಬೇಕು. ಒಳಗೆ ಕೊಲೆಗಾರನೂ ಇರಬಹುದು, ಮಹಾದೇವನೂ ಇರಬಹುದು - ಕಾಯುವುದಷ್ಟೇ ಕೆಲಸ ಎಂದ ಮೇಲೆ ಪದ್ಯದುದ್ದಕ್ಕೆ ಚಡಪಡಿಕೆ ಯಾಕೇ ಯಾಕೇ?

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಆತ್ಮಕ್ಕೆ ದೇಹದ ಮಿತಿಯೇ ಕೆಲವೊಮ್ಮೆ ಅತೃಪ್ತಿಗೆ ಕಾರಣ ಆಗಿಬಿಡುತ್ತದೆ. ಆದರೆ ಅತೃಪ್ತಿ ನಿಜವಾಗಲು ಆತ್ಮದ ಸಹಜ ಅಲ್ಲದಿದ್ದರೂ ಇರಬಹುದು.

      ಅಳಿಸಿ
  6. "ನಚಿಕೆತನ wavefunctionನ್ನು bi-partite ಆದ producಟು ಸ್ತ್ತಿತಿಯಲ್ಲಿ ಒಂದು ಪಾರ್ಟು performer ಆಗಿ, ಇನ್ನೊಂದು ಪಾರ್ಟು performence ಅನ್ನು ನೋಡುವ ಸಾಕ್ಷಿಪ್ರಜ್ಞೆಯಾಗಿ ಬ್ಲಾಗಿಸುತ್ತಿದೆ... " ಎನ್ನುವ ನಚಿಕೇತನ ಅಂಬೋಣ/ಇಂಗಿತ ವು self-referenಸಿಯಲ್ ಆದ ಕಾರಣಕ್ಕೆ ಅಪೂರ್ಣ/inconsitenಟು; -ಅದನ್ನು consitenಟು-buಟ್-ಅಪೂರ್ಣ ಅಂತಂದುಕೊಂಡರೂ entanglemenಟನ್ನು negalecಟು ಮಾಡಿದ ಕಾರಣಕ್ಕೆ exacಟಾಗದೇ ಬರೀ approxiಮೇಟಾಗಬಹುದಷ್ಟೇ .
    --ಅಂತ ಗುರುವರ್ಯರು ಈ ಮೂಲಕ ತಮ್ಮ ಟಿಪ್ಪಣಿಯನ್ನು ಅಪ್ಪಣಿಸಿರುತ್ತಾರೆ!

    ಪ್ರತ್ಯುತ್ತರಅಳಿಸಿ