...


ಆಕಾಶಮಲ್ಲಿಗಾಗಿ  ಏರಿ 
ಹೂ ಅರಳುವ ಹೊತ್ತಲ್ಲಿ 
ಹಕ್ಕಿ ಬಂದು ಕೂತು 
“ಹಾ…ಬಂದೆ" 
ಎಂದನಂತೆ
ಪಕ್ಕದಲ್ಲಿದ್ದ ಅಳಿಲು ಹಾರಿ 
ಕರಿ ಮೋಡಕ್ಕೆ ಸುದ್ದಿಮುಟ್ಟುವಷ್ಟರಲ್ಲಿಲ್ಲಿ 
ಜೋರು ಮಳೆಯಾಗಿತ್ತು 


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ