...




ಮಲ್ಲಿಗೆ ಗಿಡದ ತುಂಬೆಲ್ಲಾ ಹೂವು 
ಮಿಣುಕು ಹುಳಕ್ಕೆ ಸಮಯವೇ ಇಲ್ಲ 
ಗಂಧರ್ವರಿರಲೇ ಬೇಕು 
ಮಸಿಕುಡಿಕೆ ಒಡೆದಿದೆ 
ಮಸಿಯೂ ಮುಗಿದಿದೆ 
ಪೂರ್ಣವಿರಾಮಕ್ಕೆ ಚುಕ್ಕಿಯೊಂದು ಬಾಕಿ 


[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

1 ಕಾಮೆಂಟ್‌: