ಇಷ್ಟದ ರುಮಾಲು ಸುತ್ತಿ
ಮನೆಗೆ ಹೊರಟೆ
ಗಟರದ ಇಲಿ ಜೋಡಿಯಾಗಿ
ಕೊಂಬೆಯ ಅಳಿಲು ತಲೆಯೆತ್ತಿ
ನೋಡುತ್ತಿದ್ದಾಗ
ಅಲ್ಲೊಬ್ಬ ಯಾವ ಉಸಾಬರಿಯೂ ಇಲ್ಲದೆ
ಹೋಗುತ್ತಿದ್ದ.
[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ