...



ಚಿಟ್ಟೆ ಹಾರಿ ಬಳಿದ ಬಣ್ಣದಿಂದ ತೆಗೆದ 
ಮಸಿ - ಬರೆದ ಹಲವು ಸಾಲು 
ಚಿಟ್ಟೆ ಎಲ್ಲಿ? ಸಾಲು ಕೇಳುತ್ತೆ 
ಮಳೆ ಗಾಳಿ ಗುಡುಗು ಮಿಂಚಿನ 
ಹೊಡೆತಕ್ಕೆ ಚಿಟ್ಟೆ ಮತ್ತೆ ಚಿಟ್ಟೆಯಾಗಲು 
ಎಲ್ಲಿವೆ ಸಾಲುಗಳು? 
ಚಿಟ್ಟೆಯ ಸರದಿಯೀಗ 
 

[ಜಪಾನೀಯರಲ್ಲಿ ಒಂದು ಸಂಪ್ರದಾಯವಿದೆಯಂತೆ.. ಒಬ್ಬ  ವ್ಯಕ್ತಿ ಸಾಯುವ ಸಮಯ ಬಂದಾಗ, ಒಂದು ಕವಿತೆಯನ್ನು ಬರೆಯಬೇಕಂತೆ. ಹಲವಾರು ಜೆನ್ ಋಷಿಗಳು, ಹೈಕು ಕವಿಗಳು ಹೀಗೆ ಬರೆದಿರುವ ಕವಿತೆಗಳನ್ನು ಓದುವಾಗ, ಅದರೊಟ್ಟಿಗೆ ಅವರ ಜೀವನ ಪದ್ಧತಿಗಳನ್ನು ಅಭ್ಯಾಸ ಮಾಡುವಾಗ, ನನಗಾದ ಅನುಭವದ ಅಕ್ಷರ ರೂಪ ಮೇಲಿನ ಕವಿತೆ.]

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ