ಸ್ಥಿತಿ ಎಂಬುದು ಒಂದು ನಿಯಮ
ಸ್ಥಿತಿಯೇ ಬದುಕಿನ ಸಹಜ ಸಾವಧಾನ ಕ್ರಿಯೆ.
.... ಕಡೆಗೆ ಒಂದು ಧೀನ ನೋಟದಲ್ಲಿ ಎರಡು ದೃಷ್ಠಿಯಾಗಿ ಸೇರಿ ಬೆಳೆದೂ ಬೆಳೆದೂ ಕ್ಷಣಮಾತ್ರಕ್ಕೆ ತಿಳಿಯದಾಗಿ ಕ್ಷಣವೇ ಅಳಿದುಹೋಗಿ ಹುಟ್ಟು ಸಂಭವಿಸಿತು.......
" ಅ
ಛೆ
ಪಾಪ
ಅಯ್ಯೋ
ಮುಂದೇನು
ಪುನರಪಿ ಜನನ
ಮತ್ತೇನೋ ಇದೆ"
... ಮತ್ತದೇನನ್ನೋ ಪಡೆವ ಬಗೆ ಸುಲುಭವಲ್ಲ ಜೀವ ಸುಲಭವಲ್ಲ ಮಾಕಾಹಳ್ಳಿಯ ಬೀದಿಗುಂಟ ನಡೆದಂತಲ್ಲ
ಎಂದಾಗಲೆ....
ಯಃಕಶ್ಚಿತ್ ನೀನು
ಬಯಲಲ್ಲಿ ಮಂಡೆ ಸುಡುವ ಬಂಡೆಯ
ಬಿಸಿಲಲ್ಲಿ ಕುಳಿತು ನಕ್ಷತ್ರಗಳ ಲೆಕ್ಕ
ಧೃವ ಕರೀತಾನೆ
ಬೋಧಿ ಮರ ಪಕ್ಕದಲ್ಲೆ ಶಿಲುಬೆ
ಎದುರಿಗೇ ಕೂತವ ಮಹಾಭೂಪ
ಅಮೃತ ಶಿಲಾ ವಿಕಾಸಕ್ಕೆ
ಮೇಕೊಡೆಯುವ ಚಿಂತೆ
ಗುರುತ್ವಾಕರ್ಷಣೆಯು ಸಹಜ ಇದೆ
ವಿಕರ್ಷಣೆ ? ಹತ್ತು ಮೀರಿ ಹನ್ನೊಂ
ದರ ವೇಗ, ನನ್ನದೇ ಕೃತ್ಯ
ಸತ್ಯ ಧೃವ ನನ್ನವನು
....ಆಗ ಅದೇ ಮಾಕಹಲ್ಲಿಯ ದಾರಿಗುಂಟ ನಡೆದಾಗ ದಕ್ಕಿದ್ದಿದು ಪಡೆದಿದ್ದಿದು ಇದನ್ನೇ ನಾ ಮಳೆ ಅಂದದ್ದು.....
"ಕಲ್ಲಿನ ರಥ, ಭೂತವನ್ನು ಕಟ್ಟೋ ಶೃಂಗಾರ
ಗೆದ್ದಲು ಎಂದೋ ತಿಂದ ಶವಕ್ಕೆ ಸುಗಂದ ಪೂ
ಸಿ ಕೂರಿಸಿ
ಉಘೇ ಉಘೇ
ಕೂಗುತ್ತಾ ಕೂಗುತ್ತಾ ಕೈ ಕಟ್ಟಿ ಕೂತಾಗ
ನೆರಳನ್ನೆ ಕೆತ್ತೊ ಉಮೇದು ಅದರಿಂದ ಶಿಲಾ
ಬಾಲೆ ಅದರೊಡೆನೆ ಸಂಭೋಗ, ಸ್ವಪ್ನ ಸ್ಖಲನದಸಂತೃಪ್ತಿ"
.......ಆದ್ದರಿಂದ ಇಷ್ಟೆಲ್ಲಾ ಆದಮೇಲೆ.....
"ವೃತ್ತಾಕಾರದ ಚಲನೆ
ಆಸಕ್ತಿ ಅಥವ ಧ್ಯೇಯ?
ಕೇಂದ್ರ ತ್ಯಾಗಿ ಹಾಗು ಕೇಂದ್ರಾಭಿಗಾಮಿಯ ನಡುವೆ
ಹಗ್ಗ ಜಗ್ಗಾಟ
ಕೊನೆ ಶುಭಂ."
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ